alex Certify ಭರ್ಜರಿ ಜಯದೊಂದಿಗೆ ದಾಖಲೆ ಬರೆದ ಟೀಂ ಇಂಡಿಯಾ: ಕಿವೀಸ್, ವಿಂಡೀಸ್ ಬಳಿಕ ಶ್ರೀಲಂಕಾ ವಿರುದ್ಧವೂ ಹ್ಯಾಟ್ರಿಕ್ ಸರಣಿ ವೈಟ್ ವಾಷ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭರ್ಜರಿ ಜಯದೊಂದಿಗೆ ದಾಖಲೆ ಬರೆದ ಟೀಂ ಇಂಡಿಯಾ: ಕಿವೀಸ್, ವಿಂಡೀಸ್ ಬಳಿಕ ಶ್ರೀಲಂಕಾ ವಿರುದ್ಧವೂ ಹ್ಯಾಟ್ರಿಕ್ ಸರಣಿ ವೈಟ್ ವಾಷ್

ಧರ್ಮಶಾಲಾ: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ಸಾಧಿಸಿದೆ. ಮೂರು ಪಂದ್ಯಗಳ ಸರಣಿಯನ್ನು 3 -0 ಅಂತರದಲ್ಲಿ ಜಯಿಸಿದ ಟೀಂ ಇಂಡಿಯಾ ಹ್ಯಾಟ್ರಿಕ್ ಸರಣಿ ವೈಟ್ ವಾಷ್ ಸಾಧನೆ ಮಾಡಿದೆ. ಕಿವೀಸ್ ಮತ್ತು ವಿಂಡೀಸ್ ನಂತರ ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನೂ ಕ್ಲೀನ್ ಸ್ವೀಪ್ ಮಾಡಿದೆ.

ಈ ಮೂಲಕ ಭಾರತ ದಾಖಲೆ ಬರೆದಿದೆ. ಟೆಸ್ಟ್ ಆಡುವ ದೇಶಗಳ ವಿರುದ್ಧ ಸತತ 3 ಸರಣಿ ವೈಟ್ ವಾಷ್  ಮಾಡಿದ ಮೊದಲ ತಂಡ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 3 -0 ಅಂತರದಿಂದ ಟಿ20 ಜಯಿಸಿದೆ.

ಇದರೊಂದಿಗೆ ಭಾರತ ಮತ್ತೊಂದು ದಾಖಲೆ ಬರೆದಿದೆ 12 ಟಿ20 ಪಂದ್ಯಗಳ ಗೆಲುವಿನ ದಾಖಲೆಯನ್ನು ಸರಿಗಟ್ಟಿದೆ. ಆಫ್ಘಾನಿಸ್ತಾನ ಮತ್ತು ರೊಮೇನಿಯಾ ತಂಡಗಳು ಸತತ 12 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿದ್ದವು. ಭಾರತ ಈ ದಾಖಲೆ ಸರಿಗಟ್ಟಿದ್ದು, ಇನ್ನೊಂದು ಪಂದ್ಯದಲ್ಲಿ ಗೆದ್ದರೆ ವಿಶ್ವ ದಾಖಲೆಗೆ ಪಾತ್ರವಾಗಲಿದೆ.

ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದ್ದು, ಭಾರತ 16.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿ ಗೆಲುವು ಕಂಡಿದೆ. ಶ್ರೇಯಸ್ ಅಯ್ಯರ್ ಅಜೇಯ 73 ರನ್ ಗಳಿಸಿದ್ದು, ಇದರೊಂದಿಗೆ ಹ್ಯಾಟ್ರಿಕ್ ಅರ್ಧ ಶತಕ ಗಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...