ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪ ಹೊತ್ತು ಬಿಸಿಸಿಐನಿಂದ 2013ರಲ್ಲಿ ನಿಷೇಧಕ್ಕೊಳಗಾಗಿದ್ದ ವೇಗಿ ಶ್ರೀಶಾಂತ್ ಇದೀಗ ಮತ್ತೆ ಕ್ರಿಕೆಟ್ ಅಂಗಳಕ್ಕೆ ವಾಪಸ್ಸಾಗಿದ್ದಾರೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇರಳ ತಂಡದ ಪರ ಶ್ರೀಶಾಂತ್ ಆಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ತಮ್ಮ ಮೊದಲ ಪಂದ್ಯದಲ್ಲೇ ಶ್ರೀಶಾಂತ್ ವಿಕೆಟ್ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ.
ಬರೋಬ್ಬರಿ 7 ವರ್ಷಗಳ ಬಳಿಕ ಶ್ರೀಶಾಂತ್ ಬೌಲಿಂಗ್ ಕರಾಮತ್ತನ್ನ ಕಂಡು ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನ ವ್ಯಾಪಕವಾಗಿ ಹಂಚಿಕೊಳ್ತಿದ್ದಾರೆ.
ಕೇರಳ ಹಾಗೂ ಪುದುಚೇರಿ ತಂಡದ ನಡುವಿನ ಪಂದ್ಯದಲ್ಲಿ ಎದುರಾಳಿ ತಂಡ ಓಪನಿಂಗ್ ಬ್ಯಾಟ್ಸಮನ್ ಫಾಬಿದ್ ಅಹ್ಮದ್ರನ್ನ ಶ್ರೀಶಾಂತ್ ಬೋಲ್ಡ್ ಮಾಡಿದ್ದಾರೆ. ಈ ಮೂಲಕ ಬರೋಬ್ಬರಿ 2804 ದಿನಗಳ ಬಳಿಕ ಶ್ರೀಶಾಂತ್ ತಮ್ಮ ಜೀವನದಲ್ಲಿ ಈ ಸಾಧನೆ ಮಾಡಿದಂತಾಗಿದೆ. 4 ಓವರ್ಗಳಲ್ಲಿ ಶ್ರೀಶಾಂತ್ 29 ರನ್ಗಳನ್ನ ನೀಡಿ 7.20 ಎಕಾನಮಿ ಕಾಪಾಡಿಕೊಂಡಿದ್ದಾರೆ.
https://twitter.com/i/status/1348630223948976133
https://twitter.com/i/status/1348637238649765890