alex Certify ಐಪಿಎಲ್ 2021 ರದ್ದಾದಲ್ಲಿ ಬಿಸಿಸಿಐಗೆ ಆಗುವ ನಷ್ಟವೆಷ್ಟು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ 2021 ರದ್ದಾದಲ್ಲಿ ಬಿಸಿಸಿಐಗೆ ಆಗುವ ನಷ್ಟವೆಷ್ಟು ಗೊತ್ತಾ….?

Domestic cricket will start as and when conditions permit: Ganguly to BCCI  state

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್. ಈ ಲೀಗ್ ಮೂಲಕ ಬಿಸಿಸಿಐ ಕೋಟ್ಯಾಂತರ  ರೂಪಾಯಿಗಳನ್ನು ಗಳಿಸಿದೆ.

ಆದರೆ ಕೋವಿಡ್ -19 ಕಾರಣದಿಂದಾಗಿ 14 ನೇ ಋತುವನ್ನು ಮಧ್ಯದಲ್ಲಿ ರದ್ದು ಮಾಡಲಾಗಿದೆ. ಇದು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗೆ ಭಾರಿ ಆರ್ಥಿಕ ನಷ್ಟವನ್ನುಂಟುಮಾಡಲಿದೆ.

ಐಪಿಎಲ್ 2021 ರ ಉಳಿದ ಪಂದ್ಯಗಳು ನಡೆಯದಿದ್ದಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ 2500 ಕೋಟಿ ರೂಪಾಯಿ ನಷ್ಟವಾಗಬಹುದು ಎಂದು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಹೇಳಿದ್ದಾರೆ.

ಐಪಿಎಲ್ 2021 ಅನ್ನು ಮುಂದೂಡುವುದು ಭಾರತೀಯ ಕ್ರಿಕೆಟ್‌ಗೆ ದೊಡ್ಡ ಹಿನ್ನಡೆಯೆಂದು ಪರಿಗಣಿಸಲು ಸೌರವ್ ಗಂಗೂಲಿ ನಿರಾಕರಿಸಿದ್ದಾರೆ. ಪಂದ್ಯಾವಳಿಯ 31 ಪಂದ್ಯಗಳು ಉಳಿದಿವೆ. ಇದನ್ನು ಮುಂದೂಡುವುದು ದೊಡ್ಡ ಆಘಾತವಲ್ಲ. ಇದು ಐಪಿಎಲ್‌ನ ಬ್ರಾಂಡ್ ಮೌಲ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ಆರ್ಥಿಕ ನಷ್ಟದ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ, ಈ ಪಂದ್ಯಾವಳಿ ಪೂರ್ಣಗೊಳ್ಳದಿದ್ದರೆ ಬಿಸಿಸಿಐಗೆ ಸುಮಾರು 2500 ಕೋಟಿ ರೂಪಾಯಿಗಳ ನಷ್ಟವಾಗುತ್ತದೆ ಎಂದಿದ್ದಾರೆ. ಇಂಗ್ಲೆಂಡ್ ಪ್ರವಾಸದ ನಂತ್ರ ಐಪಿಎಲ್ ಆಯೋಜನೆ ಬಗ್ಗೆ ಚಿಂತನೆ ನಡೆಸುವುದಾಗಿ ಗಂಗೂಲಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...