ಸ್ನೋ ಬೋರ್ಡರ್ ಒಬ್ಬರು ಹಿಮಪಾತದಲ್ಲಿ ಕೊಚ್ಚಿಹೋದರೂ ಬದುಕಿ ಬಂದ ಘಟನೆ ಕೊಲರಾಡೋದಲ್ಲಿ ಘಟಿಸಿದೆ.
ಮಾರಿಸ್ ಕೆರ್ವಿನ್ ಹೆಸರಿನ ಈ ಸ್ನೋ ಬೋರ್ಡರ್ ಕೊಲರಾಡೋದ ಸಮಿತ್ ಕೌಂಟಿಯ ನೋ ನೇಮ್ ಪಾರ್ಕ್ನಲ್ಲಿ ಜನವರಿ 8ರಂದು ಸಾಹಸದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರ ಮೇಲೆ ಹಿಮಪಾತವೊಂದು ಅಪ್ಪಳಿಸಿದೆ.
“ಹಿಮಪಾತ ಎಷ್ಟು ದೊಡ್ಡದು ಎಂದು ನೋಡಿ ಬೆಚ್ಚಿಬಿದ್ದಿದ್ದೆ. ಅದೃಷ್ಟವಶಾತ್ ನಾನು ಜೀವಂತ ಉಳಿದಿದ್ದು, ಯಾವುದೇ ಗಾಯಗಳನ್ನು ಮಾಡಿಕೊಂಡಿಲ್ಲ. ಹಿಮಪಾತದ ತೀವ್ರತೆಯು ಹೂತು ಹಾಕುವಷ್ಟರ ಮಟ್ಟಿಗೆ ಇತ್ತು” ಎಂದು ಕೆರ್ವಿನ್ ಸಿಎನ್ಎನ್ಗೆ ತಿಳಿಸಿದ್ದಾರೆ. ಹೃದಯಬಡಿತ ಹೆಚ್ಚಿಸುವ ಈ ಅನುಭವವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಕೆರ್ವಿನ್ ಸಫಲರಾಗಿದ್ದಾರೆ.
https://www.instagram.com/tv/CJ3_6OmjFz0/?utm_source=ig_web_copy_link