alex Certify ಸ್ನೋ ಬೋರ್ಡರ್‌ ಕ್ಯಾಮರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೋ ಬೋರ್ಡರ್‌ ಕ್ಯಾಮರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಸ್ನೋ ಬೋರ್ಡರ್‌ ಒಬ್ಬರು ಹಿಮಪಾತದಲ್ಲಿ ಕೊಚ್ಚಿಹೋದರೂ ಬದುಕಿ ಬಂದ ಘಟನೆ ಕೊಲರಾಡೋದಲ್ಲಿ ಘಟಿಸಿದೆ.

ಮಾರಿಸ್‌ ಕೆರ್ವಿನ್ ಹೆಸರಿನ ಈ ಸ್ನೋ ಬೋರ್ಡರ್‌ ಕೊಲರಾಡೋದ ಸಮಿತ್ ಕೌಂಟಿಯ ನೋ ನೇಮ್ ಪಾರ್ಕ್‌ನಲ್ಲಿ ಜನವರಿ 8ರಂದು ಸಾಹಸದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರ ಮೇಲೆ ಹಿಮಪಾತವೊಂದು ಅಪ್ಪಳಿಸಿದೆ.

“ಹಿಮಪಾತ ಎಷ್ಟು ದೊಡ್ಡದು ಎಂದು ನೋಡಿ ಬೆಚ್ಚಿಬಿದ್ದಿದ್ದೆ. ಅದೃಷ್ಟವಶಾತ್‌ ನಾನು ಜೀವಂತ ಉಳಿದಿದ್ದು, ಯಾವುದೇ ಗಾಯಗಳನ್ನು ಮಾಡಿಕೊಂಡಿಲ್ಲ. ಹಿಮಪಾತದ ತೀವ್ರತೆಯು ಹೂತು ಹಾಕುವಷ್ಟರ ಮಟ್ಟಿಗೆ ಇತ್ತು” ಎಂದು ಕೆರ್ವಿನ್ ಸಿಎನ್‌ಎನ್‌ಗೆ ತಿಳಿಸಿದ್ದಾರೆ. ಹೃದಯಬಡಿತ ಹೆಚ್ಚಿಸುವ ಈ ಅನುಭವವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಕೆರ್ವಿನ್ ಸಫಲರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...