alex Certify ಭಾರತಕ್ಕೆ ಭರ್ಜರಿ ಜಯ: ಏಕದಿನ ಸರಣಿಯಲ್ಲಿ ಶುಭಾರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತಕ್ಕೆ ಭರ್ಜರಿ ಜಯ: ಏಕದಿನ ಸರಣಿಯಲ್ಲಿ ಶುಭಾರಂಭ

ಕೊಲಂಬೊ: ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಶುಭಾರಂಭ ಮಾಡಿದೆ. ಶ್ರೀಲಂಕಾ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಶಿಖರ್ ಧವನ್ ನಾಯಕತ್ವದ ಭಾರತ ತಂಡ 1 -0 ಅಂತರದ ಮುನ್ನಡೆ ಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಶ್ರೀಲಂಕಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 262 ರನ್ ಕಲೆಹಾಕಿತು. ಅವಿಷ್ಕಾ ಫೆರ್ನಾಂಡೋ 33, ಮಿನೋದ್ ಭರುಕಾ 27, ಭನುಕಾ ರಾಜಪಕ್ಷ 24, ಚರಿತ್ ಅಸಲಂಕಾ 38, ದಾಸುನ್ ಶನಕ 39, ಚಮಿಕಾ ಕರುಣರತ್ನೆ ಅಜೇಯ 43 ರನ್ ಗಳಿಸಿದರು. ಭಾರತದ ಪರವಾಗಿ ದೀಪಕ್ ಚಾಹರ್ 2, ಹಾರ್ದಿಕ್ ಪಾಂಡ್ಯ 1, ಯಜುವೇಂದ್ರ ಚಾಹಲ್ 2, ಕುಲದೀಪ್ ಯಾದವ್ 2, ಕೃಣಾಲ್ ಪಾಂಡ್ಯ 1 ವಿಕೆಟ್ ಪಡೆದರು.

ಗೆಲುವಿನ ಗುರಿ ಬೆನ್ನತ್ತಿದ್ದ ಭಾರತ 36.4 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿ ಗೆಲುವಿನ ನಗೆ ಬೀರಿದೆ. ಶಿಖರ್ ಧವನ್ ಅಜೇಯ 86, ಪೃಥ್ವಿ ಶಾ 43, ಇಶಾನ್ ಕಿಶನ್ 59, ಮನೀಶ್ ಪಾಂಡೆ 26, ಸೂರ್ಯಕುಮಾರ್ ಅಜೇಯ 31 ರನ್ ಗಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...