
ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಕರಾಚಿ ಕಿಂಗ್ಸ್ ಚಾಂಪಿಯನ್ ಆಗಿದ್ದು ಇದೇ ಮೊದಲನೇ ಬಾರಿಗೆ. ಆದರೆ ಕರಾಚಿ ಕಿಂಗ್ಸ್ ತಂಡದ ಆಟಗಾರ ಶೆರ್ಫೇನ್ ರುದರ್ಫೋರ್ಡ್ ಮಾತ್ರ ಟ್ವಿಟರ್ನಲ್ಲಿ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದಾರೆ.
ನವೆಂಬರ್ 17ರಂದು ಪಿಎಸ್ಎಲ್ ಟ್ರೋಫಿ ಎತ್ತಿದ ರುದರ್ಫೋರ್ಡ್, ನವೆಂಬರ್ 10ರಂದು ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲೂ ಚಾಂಪಿಯನ್ ಪಟ್ಟ ಅಲಂಕರಿಸಿದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. 22 ವರ್ಷದ ಈ ಕ್ರಿಕೆಟಿಗ ಮುಂಬೈ ಇಂಡಿಯನ್ಸ್ನ ಒಂದೇ ಒಂದು ಪಂದ್ಯದಲ್ಲಿ ಪ್ರದರ್ಶನ ತೋರದೇ ಇದ್ದರೂ ಸಹ 7 ದಿನಗಳ ಅವಧಿಯಲ್ಲಿ 2 ಟಿ 20 ಲೀಗ್ ಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಹಿಂದೆ ಕರಾಚಿ ಕಿಂಗ್ಸ್ ಪರ ಆಡುವಾಗ ಎಂಐ ತಂಡದ ಗ್ಲೌಸ್ ಧರಿಸುವ ಮೂಲಕ ಸುದ್ದಿಯಾಗಿದ್ದರು.