
54 ರನ್ಗಳ ಮುನ್ನಡೆ ಹೊಂದಿದ್ದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ಆರಂಭಿಸಿತ್ತು. ಆದರೆ ಟೀಂ ಇಂಡಿಯಾ ಬೌಲರ್ಗಳಾದ ಸಿರಾಜ್ ಹಾಗೂ ಠಾಕೂರ್ ಆಸ್ಟ್ರೇಲಿಯಾ ಆಟಗಾರರಿಗೆ ನಡುಕ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದು ಆಸ್ಟ್ರೇಲಿಯಾ 294 ರನ್ಗಳಿಗೆ ಆಲೌಟ್ ಆಗಿದೆ.
ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಮೊಹಮ್ಮದ್ ಸಿರಾಜ್ 5, ಶಾರ್ದೂಲ್ ಠಾಕೂರ್ 4 ವಿಕೆಟ್ ಪಡೆದಿದ್ದಾರೆ. ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ 5ನೇ ವಿಕೆಟ್ಗಾಗಿ ಶ್ರಮಿಸುತ್ತಿದ್ದರು.
ಆದರೆ ಕೊನೆಯದಾಗಿ 5ನೇ ವಿಕೆಟ್ ಸಿರಾಜ್ ಪಾಲಾಗಿದೆ. ಈ ವೇಳೆ ಸಿರಾಜ್ ಚೆಂಡನ್ನ ಪ್ರದರ್ಶಿಸುತ್ತದಂತೆಯೇ ಶಾರ್ದೂಲ್ ಸಂತೋಷ ವ್ಯಕ್ತಪಡಿಸಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಬ್ಬರೂ ಒಂದೇ ಗುರಿಗಾಗಿ ಸ್ಪರ್ಧಿಸುತ್ತಿದ್ದರೂ ಸಹ ಸ್ವಲ್ಪವೂ ಅಸೂಯೆ ಪಡದ ಶಾರ್ದೂಲ್ ಠಾಕೂರ್ರನ್ನ ನೆಟ್ಟಿಗರು ಹಾಡಿ ಹೊಗಳ್ತಿದ್ದಾರೆ. ಇದು ಟೀಂ ಇಂಡಿಯಾದ ಶಕ್ತಿ ಎಂದು ಎಲ್ಲರೂ ಅಭಿಪ್ರಾಯ ಪಟ್ಟಿದ್ದಾರೆ.
https://twitter.com/madhoshimein/status/1351052402854604800