ಮಂಡಿ ನೋವಿನ ಕಾರಣದಿಂದಾಗಿ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್ ನಿಂದ ಹಿಂದೆ ಸರಿದಿದ್ದಾರೆ. ಗಾಯದ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಅವರು ಘೋಷಿಸಿದ್ದಾರೆ.
ಆರು ಬಾರಿ ಚಾಂಪಿಯನ್ ಆಗಿರುವ ಅವರು ಜುಲೈನಲ್ಲಿ ವಿಂಬಲ್ಡನ್ ನಲ್ಲಿ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ನಿವೃತ್ತರಾಗಿದ್ದರು.
ನ್ಯೂಯಾರ್ಕ್ ವಿಶ್ವದ ಅತ್ಯಂತ ರೋಮಾಂಚಕಾರಿ ನಗರಗಳಲ್ಲಿ ಒಂದಾಗಿದೆ. ನಾನು ಇಷ್ಟ ಪಡುವ ಮತ್ತು ಆಡುವ ನೆಚ್ಚಿನ ಸ್ಥಳಗಳಲ್ಲಿ ನ್ಯೂಯಾರ್ಕ್ ಒಂದಾಗಿದ್ದು, ನಾನು ಅಭಿಮಾನಿಗಳನ್ನು ಕಣ್ತುಂಬಿಕೊಳ್ಳುವುದನ್ನು ಕಳೆದುಕೊಳ್ಳುತ್ತೇನೆ. ಆದರೆ, ದೂರದಿಂದಲೇ ಎಲ್ಲರನ್ನೂ ಹುರಿದುಂಬಿಸುತ್ತೇವೆ ಎಂದು ಸೆರೆನಾ ವಿಲಿಯಮ್ಸ್ ತಿಳಿಸಿದ್ದಾರೆ.