ಇಂಗ್ಲೆಂಡ್ ವಿರುದ್ಧ ನಡೆದ ಕೊನೆ ಪಂದ್ಯದಿಂದ ಹೊರಗಿದ್ದ ಜಸ್ಪ್ರೀತ್ ಬುಮ್ರಾ ಅಭಿಮಾನಿಗಳನ್ನು ನಿರಾಸೆಗೊಳಿಸಿದ್ದರು. ಬುಮ್ರಾ ತಂಡದಿಂದ ಹೊರಗಿರಲು ಕಾರಣವೇನು ಎಂಬುದನ್ನು ತಿಳಿಯುವ ಕುತೂಹಲ ಅಭಿಮಾನಿಗಳಿಗಿತ್ತು. ಈ ಮಧ್ಯೆ ಇದಕ್ಕೆ ಬುಮ್ರಾ ಮದುವೆ ಕಾರಣ ಎಂಬ ಸುದ್ದಿ ಹರಡಿತ್ತು. ಬುಮ್ರಾ, ಕ್ರೀಡಾ ನಿರೂಪಕಿ ಸಂಜನಾ ಗಣೇಶ್ ಕೈ ಹಿಡಿಯಲಿದ್ದಾರೆಂಬ ಸುದ್ದಿಯಿದೆ.
ಬುಮ್ರಾ-ಸಂಜನಾ ಮಾರ್ಚ್ 14-15ರಂದು ಗೋವಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಸಮಾರಂಭದಲ್ಲಿ 20 ಮಂದಿ ಮಾತ್ರ ಪಾಲ್ಗೊಳ್ಳಲಿದ್ದಾರೆ ಎನ್ನಲಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬುಮ್ರಾಗೆ ಶುಭಾಷಯ ಹೇಳಲಾಗ್ತಿದೆ. ಆದ್ರೆ ಈವರೆಗೂ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಈ ಮಧ್ಯೆ ಸಂಜನಾ ಅವರ ಹಳೆ ಟ್ವಿಟ್ ಒಂದು ವೈರಲ್ ಆಗಿದೆ. ಸಂಜನಾ ಜನವರಿ 10ರಂದು ಬುಮ್ರಾ ಫೋಟೋ ಹಾಕಿ ಟ್ವಿಟ್ ಮಾಡಿದ್ದರು. ಬುಮ್ರಾ ಮೈದಾನದ ಮನಸ್ಥಿತಿ, ತನ್ನ ದೈನಂದಿನ ಮನಸ್ಥಿತಿಗೆ ಹೋಲುತ್ತದೆ ಎಂದು ಟ್ವಿಟ್ ಮಾಡಿದ್ದರು. ಸಂಜನಾ, ಬುಮ್ರಾ ಅವರ ಟೆಸ್ಟ್ ಪಂದ್ಯದ ಫೋಟೋ ಹಂಚಿಕೊಂಡಿದ್ದರು. ಈ ಟ್ವಿಟ್ ಈಗ ಮತ್ತೆ ವೈರಲ್ ಆಗ್ತಿದೆ.
ಫಿಟ್ನೆಸ್ ಪರೀಕ್ಷೆಯಲ್ಲಿ ಈ ಆಟಗಾರ ಫೇಲ್: ಟೀಂ ಇಂಡಿಯಾಕ್ಕೆ ಎರಡು ಶಾಕ್
ಸಂಜನಾ 2014ರಲ್ಲಿ ಮಿಸ್ ಇಂಡಿಯಾ ಪ್ರಶಸ್ತಿ ಗೆದ್ದುಕೊಂಡಿದ್ದರು. ಅನೇಕ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದ ಸಂಜನಾ ಕ್ರೀಡಾ ನಿರೂಪಕಿಯಾಗಿ ಕೆಲಸ ಮಾಡ್ತಿದ್ದಾರೆ.