alex Certify ಭಾರತೀಯ ಕ್ರಿಕೆಟ್ ಗೆ ನಿಮ್ಮ ಕೊಡುಗೆ ಅಪಾರ: ವಿದಾಯ ಹೇಳಿದ ಧೋನಿಗೆ ಸಚಿನ್ ತೆಂಡೂಲ್ಕರ್ ಹಾರೈಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಕ್ರಿಕೆಟ್ ಗೆ ನಿಮ್ಮ ಕೊಡುಗೆ ಅಪಾರ: ವಿದಾಯ ಹೇಳಿದ ಧೋನಿಗೆ ಸಚಿನ್ ತೆಂಡೂಲ್ಕರ್ ಹಾರೈಕೆ

ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಅವರು ನಾಯಕನಾಗಿದ್ದ ಸಂದರ್ಭದಲ್ಲೇ ಭಾರತ ತಂಡ ವಿಶ್ವಕಪ್ ಜಯಿಸಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ತಂಡದಲ್ಲಿದ್ದರು.

ಈಗ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವುದಕ್ಕೆ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿ ಭಾರತೀಯ ಕ್ರಿಕೆಟ್ ಗೆ ಧೋನಿ ಕೊಡುಗೆ ಅಪಾರವಾಗಿದೆ ಎಂದು ಹೇಳಿದ್ದಾರೆ.

‘ಭಾರತೀಯ ಕ್ರಿಕೆಟ್ ಗೆ ನಿಮ್ಮ ಕೊಡುಗೆ ಅಪಾರವಾಗಿದೆ. ಇಬ್ಬರೂ ಒಟ್ಟಿಗೆ 2011 ರ ವಿಶ್ವಕಪ್ ಗೆದ್ದಿರುವುದು ನನ್ನ ಜೀವನದ ಅತ್ಯುತ್ತಮ ಕ್ಷಣವಾಗಿದೆ ಎಂದು ಹೇಳಿರುವ ಸಚಿನ್, ನಿಮ್ಮ ಜೀವನದ ಎರಡನೇ ಇನ್ನಿಂಗ್ಸ್ ಗೆ ಮತ್ತು ನಿಮ್ಮ ಕುಟುಂಬಕ್ಕೆ ಶುಭ ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿ ಹಾರೈಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...