alex Certify ಶೈನ್​ ಆದ ಸ್ಟೋಕ್ಸ್: ಆರ್ಚರ್​ ಕ್ಯಾಚ್ ಗೆ ನೆಟ್ಟಿಗರು ಶಾಕ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೈನ್​ ಆದ ಸ್ಟೋಕ್ಸ್: ಆರ್ಚರ್​ ಕ್ಯಾಚ್ ಗೆ ನೆಟ್ಟಿಗರು ಶಾಕ್​

Riyan Parag's Reaction to Jofra Archer's One-handed Freak Catch Against Mumbai Indians is All of Us

ವಿಶ್ವಕಪ್​ನಲ್ಲಿ ಹೀರೋ ಎನಿಸಿಕೊಂಡಿದ್ದ ಬೆನ್​ಸ್ಟೋಕ್ಸ್ ಈ ಬಾರಿಯ ಐಪಿಎಲ್​ ಆವೃತ್ತಿಯಲ್ಲಿ ಅಷ್ಟೊಂದು ಶೈನ್​ ಆಗದೇ ಅಭಿಮಾನಿಗಳ ಮುಖದಲ್ಲಿ ನಿರಾಸೆ ಮೂಡಿಸಿದ್ದರು. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಟಿ 20 ಪಂದ್ಯದಲ್ಲಿ ಶತಕ ಬಾರಿಸೋ ಮೂಲಕ ತನ್ನ ಖದರ್​ನ್ನ ಮತ್ತೊಮ್ಮೆ ಪ್ರೂವ್​ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್ ನೀಡಿದ್ದ 196 ರನ್​ಗಳ ಗುರಿ ಬೆನ್ನಟ್ಟಿದ ಸ್ಟೋಕ್ಸ್ (107*) ಹಾಗೂ ಸಂಜು ಸ್ಯಾಮ್ಸನ್​ (54*) 152 ರನ್​ಗಳ ಜೊತೆಯಾಟ ಆಡಿದ್ರು. ಈ ಮೂಲಕ ರಾಜಸ್ಥಾನ ರಾಯಲ್ಸ್ ಗೆಲುವಿಗೆ ಪ್ರಮುಖ ಕಾರಣ ಎನಿಸಿಕೊಂಡ್ರು.

ಪಂದ್ಯದ ಆರಂಭದಲ್ಲಿ ಬ್ಯಾಟ್​ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಸಂಕಷ್ಟ ಅನುಭವಿಸಿತು. ಕ್ವಿಂಟನ್​ ಡಿಕಾಕ್​ ಕೇವಲ 6 ರನ್​ ಗಳಿಸಿ ಪೆವಿಲಿಯನ್​ ದಾರಿ ಹಿಡಿದರು. ಇಶಾನ್​ ಕಿಶನ್​ ಹಾಗೂ ಸೂರ್ಯ ಕುಮಾರ್​ 83 ರನ್​ಗಳ ಉತ್ತಮ ಜೊತೆಯಾಟ ನೀಡಿದರಾದರೂ ಆರ್ಚರ್​ ಹಿಡಿದ ಅದ್ಭುತ ಕ್ಯಾಚ್​ನಿಂದಾಗಿ ಕಿಶನ್​ 37 ರನ್​ಗೆ ಔಟ್​ ಆದ್ರು. ಬೌಂಡರಿ ಲೈನ್​ಗೆ ಹೊರಟಿದ್ದ ಬಾಲ್​ನ್ನ ಆರ್ಚರ್ ಒಂದೇ ಕೈಯಲ್ಲಿ ಹಿಡಿದ ಪರಿ ಕಂಡು ಆಟಗಾರರೆಲ್ಲ ನಿಬ್ಬೆರಗಾದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...