
ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿಜಯದ ನಗೆ ಬೀರಿದ ಬಳಿಕ ಭಾರತೀಯ ಆಟಗಾರರು ಫುಲ್ ಚಿಲ್ಲಿಂಗ್ ಮೂಡ್ಗೆ ಜಾರಿದ್ದಾರೆ.
ಟೀಂ ಇಂಡಿಯಾ ಆಟಗಾರರು ಗೆಲುವನ್ನ ಸಂಭ್ರಮಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗ್ತಿದೆ. ರಿಷಬ್ ಪಂತ್ ಕೂಡ ಈ ಸೆಲೆಬ್ರೇಷನ್ನ ಫೋಟೋಗಳನ್ನ ಶೇರ್ ಮಾಡಿದ್ದು ಇದರಲ್ಲಿ ಅವರು ಕೆಂಪು ಬಣ್ಣದ ಲಿವರ್ಪೂಲ್ ಫುಟ್ಬಾಲ್ ಕ್ಲಬ್ನ ಟೀ ಶರ್ಟ್ ಧರಿಸಿದ್ದಾರೆ.
ಈ ಫೋಟೋಗೆ ರಿಷಬ್ ಪಂತ್, ನಮ್ಮ ಟೀಂ ಒಟ್ಟಿಗೆ ಎಂಜಾಯ್ ಮಾಡುತ್ತೆ ಹಾಗೂ ಒಟ್ಟಿಗೆ ಗೆಲ್ಲುತ್ತೆ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಫೋಟೋದಲ್ಲಿ ಪಂತ್ ಹಾಕಿದ ಲಿವರ್ಪೂಲ್ ಜೆರ್ಸಿ ಸದ್ಯ ಟಾಕ್ ಆಫ್ ದ ಟೌನ್ ಆಗಿದೆ. ಪಂತ್ರ ಈ ಪೋಸ್ಟ್ಗೆ ಲಿವರ್ಪೂಲ್ ಎಫ್ಸಿ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಪ್ರತಿಕ್ರಿಯೆ ನೀಡಿದೆ. ಅಲ್ಲದೇ ಅಭಿಮಾನಿಗಳು ಕೂಡ ತಮ್ಮದೇ ಆದ ರೀತಿಯಲ್ಲಿ ಪಂತ್ರ ಟೀ ಶರ್ಟ್ ಬಗ್ಗೆ ಮಾತನಾಡಿಕೊಳ್ತಿದ್ದಾರೆ.