ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಭಾರತದ ತಂಡದ ವಿಕೆಟ್ ಕೀಪರ್ ರಿಶಭ್ ಪಂತ್, ಮೈದಾನದಲ್ಲಿರುವ ವೇಳೆ ಎದುರಾಳಿ ಬ್ಯಾಟ್ಸ್ಮನ್ಗಳ ಏಕಾಗ್ರತೆ ಹಾಳು ಮಾಡಲು ಸಿಕ್ಕಾಪಟ್ಟೆ ಮಾತನಾಡುವ ದೃಶ್ಯಾವಳಿಗಳು ಸ್ಟಂಪ್ ಕ್ಯಾಮೆರಾ & ಮೈಕ್ನಲ್ಲಿ ದಾಖಲಾಗಿ, ಅವೆಲ್ಲಾ ಸಖತ್ ವೈರಲ್ ಆಗಿವೆ.
ಬ್ರಿಸ್ಬೇನ್ನ ಗಬ್ಬಾದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ವಿಕೆಟ್ ಕೀಪಿಂಗ್ ಮಾಡುವಾಗ 23 ವರ್ಷದ ಪಂತ್, ’ಸ್ಪೈಡರ್ಮನ್, ಸ್ಪೈಡರ್ಮನ್’ ಎಂದು ಹಾಡುತ್ತಿರುವುದು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದೆ.
ಸರಣಿಯು 1-1ರಲ್ಲಿ ಸಮನಾಗಿದ್ದು, ಉಭಯ ತಂಡಗಳಲ್ಲೂ ಸಹ ಸರಣಿ ಗೆಲ್ಲಬೇಕೆಂಬ ಪೈಪೋಟಿಯುತ ಆಟ ಕಂಡುಬರುತ್ತಿದೆ. ಆಸ್ಟ್ರೇಲಿಯಾದ ಟಿಮ್ ಪೇನ್ ಹಾಗೂ ಕೆಮರಾನ್ ಗ್ರೀನ್ ಕ್ರೀಸ್ನಲ್ಲಿದ್ದ ವೇಳೆ ಪಂತ್ ಎಂಜಾತ್ ಮಾಡುತ್ತಿದ್ದ ದೃಶ್ಯ ಸೆರೆಯಾಗಿದೆ.