alex Certify ಸನ್ ರೈಸರ್ಸ್ ವಿರುದ್ಧ ಬಿಗ್ ಫೈಟ್: ಹಸಿರು ಬಣ್ಣದ ಜರ್ಸಿಯೊಂದಿಗೆ RCB ಕಣಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸನ್ ರೈಸರ್ಸ್ ವಿರುದ್ಧ ಬಿಗ್ ಫೈಟ್: ಹಸಿರು ಬಣ್ಣದ ಜರ್ಸಿಯೊಂದಿಗೆ RCB ಕಣಕ್ಕೆ

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಏಪ್ರಿಲ್ 23 ರಂದು ನಡೆದ ಮೊದಲ ಪಂದ್ಯದಲ್ಲಿ ಆರ್.ಎಸ್.ಬಿ. ಸನ್ ರೈಸರ್ಸ್ ವಿರುದ್ಧ ಸೋಲು ಕಂಡಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೇಡುತೀರಿಸಿಕೊಳ್ಳಲು ಆರ್.ಸಿ.ಬಿ. ಕಾರ್ಯತಂತ್ರ ರೂಪಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಸದೃಢವಾಗಿರುವ ಆರ್.ಸಿ.ಬಿ. ಇಂದು ಹಸಿರು ಬಣ್ಣದ ಜರ್ಸಿ ಧರಿಸಿ ಆಡಲಿದ್ದಾರೆ.  ಗೋಗ್ರೀನ್ ಸ್ವಚ್ಛ ಹಾಗೂ ಸುಂದರ ಪರಿಸರದ ಗುರಿಯೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ.

ಪ್ಲೇ ಆಫ್ ಹಂತ ಪ್ರವೇಶಿಸಲು ರೇಸ್ ನಲ್ಲಿರುವ ಎರಡೂ ತಂಡಗಳಿಗೆ ಇದು ನಿರ್ಣಾಯಕ ಪಂದ್ಯವಾಗಿದೆ. ಆರ್ಸಿಬಿ ಮತ್ತು ಸನ್ ರೈಸರ್ಸ್ ಹೈದರಾಬಾದ್ 20 ಬಾರಿ ಮುಖಾಮುಖಿಯಾಗಿದ್ದು, ಆರ್ಸಿಬಿ 8 ಸಲ ಮತ್ತು ಸನ್ ರೈಸರ್ಸ್ 12 ಸಲ ಗೆಲುವು ಕಂಡಿದೆ. ಮಧ್ಯಾಹ್ನ 3.30 ಕ್ಕೆ ಪಂದ್ಯ ಆರಂಭವಾಗಲಿದ್ದು ಭಾರಿ ಕುತೂಹಲ ಮೂಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...