ಈ ಬಾರಿಯ ಐಪಿಎಲ್ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರಬಿದ್ದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರ್ತಿವೆ. ಆದರೆ ಆರ್ಸಿಬಿ ಸಿಬ್ಬಂದಿ ಮುಖ್ಯಸ್ಥರಾದ ಮೈಕ್ ಹೆಸ್ಸನ್ ಹಾಗೂ ಸೈಮನ್ ಕ್ಯಾಟಿಚ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ.
ಆರ್ಸಿಬಿ ತನ್ನ ಕಳಪೆ ಬ್ಯಾಟಿಂಗ್ನಿಂದಾಗಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ಶರಣಾಗಿದೆ. ಇದಾದ ಬಳಿಕ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಕೊಹ್ಲಿಯನ್ನ ನಾಯಕನನ್ನ ತೆಗೆದುಹಾಕುವಂತೆ ಕರೆ ನೀಡಿದ್ದಾರೆ.
ವಿರಾಟ್ ಕೊಹ್ಲಿಯನ್ನ ನಾಯಕರನ್ನಾಗಿ ಪಡೆದಿರೋದು ನಮ್ಮ ಅದೃಷ್ಟ. ಅವರು ವೃತ್ತಿಪರರು ಹಾಗೂ ತಂಡವನ್ನ ಚೆನ್ನಾಗಿ ಮುನ್ನಡೆಸಿದ್ದಾರೆ. ಅಲ್ಲದೇ ಪಡಿಕಲ್ರಂತಹ ಯುವ ಆಟಗಾರರಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು ಅಂತಾ ಕ್ಯಾಟಿಚ್ ಹೇಳಿದ್ದಾರೆ.
ಮೈಕ್ ಹೆಸ್ಸನ್ ಕೂಡ ವಿರಾಟ್ ರಂತಹ ಇನ್ನೊಬ್ಬ ನಾಯಕ ತಂಡಕ್ಕೆ ಸಿಗಲಿಕ್ಕಿಲ್ಲ ಅಂತಾ ಅಭಿಪ್ರಾಯಪಟ್ಟಿದ್ದಾರೆ.