ಕ್ರಿಕೆಟ್ ಪಂದ್ಯದ ಮೇಲೂ ಕೊರೋನಾ ಕರಿನೆರಳು ಬಿದ್ದಿದ್ದು, ಈ ಬಾರಿ ರಣಜಿ ಟ್ರೋಫಿ ನಡೆಸದಿರಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 87 ವರ್ಷಗಳ ನಂತರ ಇಂತಹ ತೀರ್ಮಾನ ಕೈಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಏಪ್ರಿಲ್ ತಿಂಗಳಲ್ಲಿ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯಲಿದ್ದು, ದೇಸಿ ಪಂದ್ಯ ಆಯೋಜಿಸಲು ಕೇವಲ ಎರೆಡು ತಿಂಗಳು ಮಾತ್ರ ಕಾಲಾವಕಾಶ ಸಿಗುತ್ತದೆ.
ಇದೇ ಕಾರಣಕ್ಕೆ ಕಾಂಗರೂ ಆಕೃತಿಯ ಕೇಕ್ ಕತ್ತರಿಸಲು ನಿರಾಕರಿಸಿದರಂತೆ ಅಜಿಂಕ್ಯ ರಹಾನೆ
ಹೀಗಾಗಿ ದೇಸಿ ಕ್ರಿಕೆಟ್ ಪಂದ್ಯ ಎಂದೇ ಹೆಸರುವಾಸಿಯಾಗಿರುವ ರಣಜಿ ಟ್ರೋಫಿ ಬದಲಿಗೆ ವಿಜಯ್ ಹಜಾರೆ ಟ್ರೋಫಿ ನಡೆಯಲಿದೆ.
ವಿವಿಧ ರಾಜ್ಯಗಳ ಕ್ರಿಕೆಟ್ ಸಂಘದಿಂದ ಮಂಡಳಿ ಕಾರ್ಯದರ್ಶಿ ಜೈ ಶಾಗೆ ಅಭಿಪ್ರಾಯಗಳು ಬಂದಿದ್ದು, ಒಂದೆಡೆ ಕೊರೋನಾ, ಮತ್ತೊಂದೆಡೆ ಐಪಿಎಲ್ ಆಯೋಜನೆ ಹಿನ್ನೆಲೆಯಲ್ಲಿ ರಣಜಿ ಟ್ರೋಫಿ ಆಯೋಜಿಸುವುದು ಕಷ್ಟವಾಗುತ್ತಿದೆ. ಅಲ್ಲಿಗೂ ಕೊರೋನಾ ಅವಧಿಯಲ್ಲಿ ಸಯ್ಯದ್ ಮುಷ್ತಾಕ್ ಆಲಿ ಟಿ-20 ಆಯೋಜಿಸಿದ್ದವು.
ಇದೀಗ ರಣಜಿ ಟ್ರೋಫಿ ಬದಲಿಗೆ ವಿಜಯ್ ಹಜಾರೆ, ಅಂಡರ್-19 ಹಾಗೂ ಹಿರಿಯ ಮಹಿಳಾ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.