alex Certify ವಿಶೇಷ ವಿಡಿಯೋ ಶೇರ್‌ ಮಾಡಿ ಧನ್ಯವಾದ ಹೇಳಿದ ರಿಷಬ್​ ಪಂತ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶೇಷ ವಿಡಿಯೋ ಶೇರ್‌ ಮಾಡಿ ಧನ್ಯವಾದ ಹೇಳಿದ ರಿಷಬ್​ ಪಂತ್​

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ರಿಷಬ್​ ಪಂತ್​​ ಭಾರತೀಯ ಕ್ರಿಕೆಟ್​ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಇದೀಗ ತಮ್ಮ ಇನ್ಸ್​ಟಾಗ್ರಾಂ ಖಾತೆಯ ಮೂಲಕ 4 ಮಿಲಿಯನ್​ ಫಾಲೋವರ್ಸ್​ಗೆ ಧನ್ಯವಾದ ಅರ್ಪಿಸಿದ್ದಾರೆ. 23 ವರ್ಷದ ವಿಕೆಟ್​ಕೀಪರ್​​​ ಬ್ಯಾಟ್ಸಮನ್​​ ತಮ್ಮ ಕ್ರಿಕೆಟ್​ ಜೀವನದ ಏರಿಳಿತಗಳನ್ನ ವಿಡಿಯೋ ಮೂಲಕ ಶೇರ್​ ಮಾಡಿದ್ದಾರೆ.

ಈ ವಿಡಿಯೋದಲ್ಲಿ ತಾವು ಈವರೆಗೆ ಧರಿಸಿದ ವಿವಿಧ ಜೆರ್ಸಿಗಳ ಕಾಮಿಕ್​​ಗಳನ್ನ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡದ ಜೆರ್ಸಿಯೂ ಇದೆ. ವಿಡಿಯೋದ ಕೊನೆಯಲ್ಲಿ ಸ್ಪೈಡರ್​ ಪಂತ್​ ಎಂದು ತಮಾಷೆಯಾಗಿ ಬರೆಯಲಾಗಿದೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಪಂತ್​​ ಈವರೆಗೆ 16 ಪಂದ್ಯಗಳನ್ನಾಡಿದ್ದು 1088 ರನ್​ ಸೇರಿಸಿದ್ದಾರೆ. 2 ಶತಕ ಹಾಗೂ 4 ಅರ್ಧ ಶತಕಗಳನ್ನ ಸಂಪಾದಿಸಿದ್ದಾರೆ. 16 ಏಕದಿನ ಪಂದ್ಯಗಳಲ್ಲಿ 374 ರನ್​ಗಳನ್ನ ಗಳಿಸಿದ್ದಾರೆ. 28 ಟಿ 20 ಪಂದ್ಯಗಳಲ್ಲಿ ಪಂತ್​ 410 ರನ್​ ಬಾರಿಸಿದ್ದಾರೆ.

View this post on Instagram

A post shared by Rishabh Pant (@rishabpant)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...