ಮೋಟರ್ ರೇಸ್ ವೃತ್ತಿ ಜೀವನದ 92ನೇ ಗೆಲುವು ಸಾಧಿಸಿದ ಆರು ಬಾರಿಯ ವಿಶ್ವ ಚಾಂಪಿಯನ್ ಲೆವಿಸ್ ಹ್ಯಾಮಿಲ್ಟನ್ ಫಾರ್ಮುಲಾ ಒನ್ ಇತಿಹಾಸದ ಅತ್ಯಂತ ಯಶಸ್ವಿ ಚಾಲಕ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಪೋರ್ಚುಗೀಸ್ ಗ್ರ್ಯಾನ್ ಪ್ರೀ ರೇಸ್ನಲ್ಲಿ ವಿಜಯಿಯಾಗುವ ಮೂಲಕ ಬ್ರಿಟನ್ನ ಹ್ಯಾಮಿಲ್ಟನ್ ಫಾರ್ಮುಲಾ ಒನ್ ಜಗತ್ತಿನ ಕಿಂಗ್ ಆಗಿದ್ದಾರೆ. ಮರ್ಸಿಡಿಸ್ ಕಾರಿನ ಚಾಲಕರಾಗಿರುವ ಹ್ಯಾಮಿಲ್ಟನ್ ಜರ್ಮನಿಯ ಮೈಕೆಲ್ ಶೂಮಾಕರ್ರ ಸಾಧನೆಯನ್ನು ಮೀರಿ ನಿಂತಿದ್ದಾರೆ.
ಈ ಹಿಂದೆ ನ್ಯೂಯೆರ್ಬರ್ಗ್ರಿಂಗ್ ಸರ್ಕ್ಯೂಟ್ನಲ್ಲಿ ತಮ್ಮ ಸಮೀಪದ ಪ್ರತಿಸ್ಫರ್ಧಿ ವಾಲ್ಟೇರಿ ಬೊಟ್ಟಾಸ್ಗಿಂತ 25.59 ಸೆಕೆಂಡ್ಗಳಷ್ಟು ಬೇಗ ಗುರಿ ಮುಟ್ಟಿದ್ದ ಹ್ಯಾಮಿಲ್ಟನ್ ಫೆರ್ರಾರಿ ದಂತಕಥೆ ಮೈಕೆಲ್ ಶುಮಾಕರ್ರ 91 ಗೆಲುವುಗಳ ಸಾಧನೆಯನ್ನು ಸಮಗಟ್ಟಿದ್ದರು.