ಬಾಲಿವುಡ್ ನಟಿ ಪರಿಣಿತಿ ಛೋಪ್ರಾ ಜನ್ಮದಿನದ ಪ್ರಯುಕ್ತ ಶುಭಾಶಯ ಕೋರಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇವರಿಬ್ಬರ ನಡುವೆ ಈ ಹಿಂದೆ ನಡೆದಿದ್ದ ಸಂಭಾಷಣೆಯೊಂದರ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ .
ಸೈನಾ ನೆಹ್ವಾಲ್ ಜೀವನ ಆಧಾರಿತ ಸಿನಿಮಾದಲ್ಲಿ ಪರಿಣಿತಿ ಛೋಪ್ರಾ ನಾಯಕಿಯಾಗಿ ನಟಿಸ್ತಾ ಇದ್ದಾರೆ. ಸೈನಾ ನೆಹ್ವಾಲ್ರನ್ನ ಭೇಟಿಯಾಗಿದ್ದ ಪರಿಣಿತಿ ತೂಕದ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ನಾನು ಒಂದೇ ದಿನಕ್ಕೆ 2-3 ಕೆಜಿ ದಪ್ಪ ಆಗಿಬಿಡುತ್ತೇನೆ ಅಂತಾ ಸೈನಾ ಹೇಳಿದ್ರೆ ನಾನಂತೂ ಒಂದೊಂದು ದಿನ ಒಂದೊಂದು ರೀತಿ ಕಾಣುತ್ತೇನೆ ಅಂತಾ ಪರಿಣಿತಿ ಹೇಳಿಕೊಂಡಿದ್ದಾರೆ.
ಈ ವಿಡಿಯೋವನ್ನ ಶೇರ್ ಮಾಡಿರುವ ಸೈನಾ ನೆಹ್ವಾಲ್ ತೂಕದ ಸಮಸ್ಯೆ ಅಂತಾ ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅನುಭವಗಳನ್ನ ಕಾಮೆಂಟ್ನಲ್ಲಿ ಹಂಚಿಕೊಳ್ತಿದ್ದಾರೆ.
https://www.instagram.com/p/CGo3Mjkjpvd/?utm_source=ig_web_copy_link