alex Certify ಸಲಹೆ ನೀಡಿದ ಕೋಚ್ ಗೆ ಚಾಕು ತೋರಿಸಿದ್ದ ಪಾಕ್ ಕ್ರಿಕೆಟಿಗ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲಹೆ ನೀಡಿದ ಕೋಚ್ ಗೆ ಚಾಕು ತೋರಿಸಿದ್ದ ಪಾಕ್ ಕ್ರಿಕೆಟಿಗ..!

ಒಂದಲ್ಲ ಒಂದು ಯಡವಟ್ಟಿನಿಂದ ಪಾಕ್ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಪಾಕ್ ಕ್ರಿಕೆಟ್ ಆಟಗಾರನೊಬ್ಬ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಸಲಹೆ ನೀಡಲು ಹೋಗಿದ್ದ ಕೋಚ್ ಗೆ ಚಾಕು ತೋರಿಸಿದ್ದರಂತೆ. ಈ ವಿಚಾರ ಇದೀಗ ಬಹಿರಂಗವಾಗಿದ್ದು ಚರ್ಚೆಗೆ ಗ್ರಾಸವಾಗಿದೆ.

ಹೌದು, ಪಾಕಿಸ್ಥಾನ ತಂಡದ ಮಾಜಿ ಆಟಗಾರ ಯೂನಿಸ್‌ ಖಾನ್‌ ಕೋಚ್ ಗಂಟಲಿಗೆ ಚೂರಿ ಹಿಡಿದು ಬೆದರಿಸಿದ್ದರಂತೆ. ಈ ವಿಚಾರವನ್ನು ಜಿಂಬಾಬ್ವೆಯ ಗ್ರ್ಯಾಂಟ್‌ ಫ್ಲವರ್‌ ಕ್ರಿಕೆಟ್‌ ಕಾರ್ಯಕ್ರಮವೊಂದರ ವೇಳೆ ಬಹಿರಂಗಪಡಿಸಿದ್ದಾರೆ. ನಾನು ಬ್ಯಾಟಿಂಗ್ ಬಗ್ಗೆ ಸಲಹೆ ನೀಡಲು ಹೋದಾಗ ಯೂನಿಸ್ ನನಗೆ ಚಾಕು ಹಿಡಿದು ಬೆದರಿಸಿದ್ದರು ಎಂದು ಹೇಳಿದ್ದಾರೆ.

ಈ ಘಟನೆ ನಡೆದು ಮೂರು ವರ್ಷ ಆಗಿದೆ. ಮೂರು ವರ್ಷದ ಹಿಂದೆ ಇಂತಹ ಕಹಿ ಘಟನೆಯೊಂದು ನಡೆದಿತ್ತು ಅಂತಾ ಗ್ರ್ಯಾಂಟ್‌ ಫ್ಲವರ್‌ ಹೇಳಿಕೊಂಡಿದ್ದಾರೆ. ಇನ್ನು ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ಪಕ್ಕದಲ್ಲೇ ಕುಳಿತಿದ್ದ ಕೋಚ್‌ ಮಿಕಿ ಆರ್ಥರ್‌ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...