ಟೀಮ್ ಇಂಡಿಯಾ ಆಟಗಾರ ಹಿಟ್ ಮ್ಯಾನ್ ರೋಹಿತ್ ಶರ್ಮಾ 2014 ನವೆಂಬರ್ 13ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಣ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ‘264’ ರನ್ ಗಳ ದೊಡ್ಡ ಮೊತ್ತ ಬಾರಿಸಿದ್ದರು.
ಇವರ ಈ ಸ್ಫೋಟಕ ಇನಿಂಗ್ಸ್ ನಲ್ಲಿ 33 ಫೋರ್ ಹಾಗೂ 9 ಸಿಕ್ಸರ್ ಗಳಿದ್ದವು. ಇಂದಿಗೆ ಈ ಪಂದ್ಯ ನಡೆದು 6 ವರ್ಷ ಪೂರೈಸಿದೆ. ರೋಹಿತ್ ಶರ್ಮಾ ಒಟ್ಟಾರೆ 3 ದ್ವಿಶತಕಗಳನ್ನು ಸಿಡಿಸಿದ್ದು ಅದರಲ್ಲಿ ಇದು ಅತ್ಯಧಿಕ ರನ್ ಆಗಿದೆ.
ರೋಹಿತ್ ಶರ್ಮ ಗಳಿಸಿದ್ದ ಈ 264 ರನ್ ದಾಖಲೆಯನ್ನು ಯಾವ ಬ್ಯಾಟ್ಸ್ಮನ್ ಗಳು ಇನ್ನೂ ಮುರಿದಿಲ್ಲ. ರೋಹಿತ್ ಶರ್ಮಾ ಅವರಿಗೆ ಇಂದು ಮರೆಯಲಾಗದ ದಿನವಾಗಿದೆ. ಇತ್ತೀಚೆಗಷ್ಟೇ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.