ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿರುವ ಒಲಂಪಿಕ್ ಕ್ರೀಡಾಕೂಟಕ್ಕೆ ಸಿದ್ಧತೆ ಜೋರಾಗಿದ್ದು ಮಂಗಳವಾರ ಟೋಕಿಯೋ ಕೊಲ್ಲಿಯಲ್ಲಿ ಒಲಿಂಪಿಕ್ ರಿಂಗ್ಗಳನ್ನ ಮರುಸ್ಥಾಪಿಸಲಾಗಿದೆ.
15.3 ಮೀಟರ್ ಎತ್ತರ ಹಾಗೂ 32.6 ಮೀಟರ್ ಅಗಲವಿರುವ ಈ ಸ್ಮಾರಕವನ್ನ ಮರುಸ್ಥಾಪಿಸುವ ಮೂಲಕ ಕ್ರೀಡಾಕೂಟ ಸಮೀಪಿಸುತ್ತಿದೆ ಎಂಬ ಸಂಕೇತವನ್ನ ವಿಶ್ವಕ್ಕೆ ಸಾರಬೇಕು ಎಂದು ಟೋಕಿಯೋ ಮಹಾನಗರ ಸರ್ಕಾರಿ ಯೋಜನಾ ನಿರ್ದೇಶಕ ಅಟ್ಸುಶಿ ಯಾನಶಿಮಿ ಹೇಳಿದ್ದಾರೆ.
ಅಲ್ಲದೇ ಮುಂದಿನ ವರ್ಷ ಖಂಡಿತವಾಗಿಯೂ ಟೋಕಿಯೋದಲ್ಲಿ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದೆ ಎಂದು ಎಲ್ಲರೂ ಭಾವಿಸಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದ್ರು.