alex Certify ಕ್ರೀಡಾ ಹಬ್ಬ ಒಲಿಂಪಿಕ್​ ಕ್ರೀಡಾಕೂಟಕ್ಕೆ ತಯಾರಿ ಶುರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರೀಡಾ ಹಬ್ಬ ಒಲಿಂಪಿಕ್​ ಕ್ರೀಡಾಕೂಟಕ್ಕೆ ತಯಾರಿ ಶುರು…!

ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿರುವ ಒಲಂಪಿಕ್​ ಕ್ರೀಡಾಕೂಟಕ್ಕೆ ಸಿದ್ಧತೆ ಜೋರಾಗಿದ್ದು ಮಂಗಳವಾರ ಟೋಕಿಯೋ ಕೊಲ್ಲಿಯಲ್ಲಿ ಒಲಿಂಪಿಕ್​ ರಿಂಗ್​​ಗಳನ್ನ ಮರುಸ್ಥಾಪಿಸಲಾಗಿದೆ.

15.3 ಮೀಟರ್​ ಎತ್ತರ ಹಾಗೂ 32.6 ಮೀಟರ್​ ಅಗಲವಿರುವ ಈ ಸ್ಮಾರಕವನ್ನ ಮರುಸ್ಥಾಪಿಸುವ ಮೂಲಕ ಕ್ರೀಡಾಕೂಟ ಸಮೀಪಿಸುತ್ತಿದೆ ಎಂಬ ಸಂಕೇತವನ್ನ ವಿಶ್ವಕ್ಕೆ ಸಾರಬೇಕು ಎಂದು ಟೋಕಿಯೋ ಮಹಾನಗರ ಸರ್ಕಾರಿ ಯೋಜನಾ ನಿರ್ದೇಶಕ ಅಟ್ಸುಶಿ ಯಾನಶಿಮಿ ಹೇಳಿದ್ದಾರೆ.

ಅಲ್ಲದೇ ಮುಂದಿನ ವರ್ಷ ಖಂಡಿತವಾಗಿಯೂ ಟೋಕಿಯೋದಲ್ಲಿ ಒಲಿಂಪಿಕ್​ ಕ್ರೀಡಾಕೂಟ ನಡೆಯಲಿದೆ ಎಂದು ಎಲ್ಲರೂ ಭಾವಿಸಬೇಕೆಂದು ನಾವು ಬಯಸುತ್ತೇವೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...