
94 ರನ್ ಗಳಿಸಿದ್ದ ಡಿವೈನ್ ತಮ್ಮ ಮುಂದಿನ ಎಸೆತದಲ್ಲಿ ಸಿಕ್ಸ್ ಬಾರಿಸಿದ್ದಾರೆ. ಆದರೆ ಈ ವೇಳೆ ಚೆಂಡು ತಾಯಿಯ ಮಡಿಲಿನಲ್ಲಿ ಕುಳಿತಿದ್ದ ಪುಟ್ಟ ಹುಡುಗಿಗೆ ಹೋಗಿ ಬಡಿದಿದೆ. ಕೂಡಲೇ ಯುವ ಅಭಿಮಾನಿಯ ಬಳಿ ಧಾವಿಸಿದ ಡೈನ್ ಅಳುತ್ತಿದ್ದ ಮಗುವಿನ ಮುಂದೆ ಮಂಡಿಯೂರಿ ಕೂತು ಮಾತನಾಡಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪುಟ್ಟ ಬಾಲಕಿಯ ಬಗ್ಗೆ ಡಿವೈನ್ ತೋರಿಸಿದ ಕಾಳಜಿಯನ್ನ ನೆಟ್ಟಿಗರು ಕೊಂಡಾಡಿದ್ದಾರೆ. ತಮ್ಮ ದಾಖಲೆಯನ್ನ ಸಂಭ್ರಮಿಸಬೇಕಾದ ಸಂದರ್ಭದಲ್ಲಿ ಬಾಲಕಿಯ ಆರೋಗ್ಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದಕ್ಕೆ ಗೌರವ ದುಪ್ಪಟ್ಟಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.