
ಯುರೋಪಿಯನ್ ಕ್ರಿಕೆಟ್ ಸರಣಿಯ ಪಂದ್ಯವೊಂದರಲ್ಲಿ, ಫೀಲ್ಡಿಂಗ್ ಮಾಡುತ್ತಿದ್ದ ವರ್ಮ್ಡೋ ಸಿಸಿ ತಂಡದ ಆಟಗಾರರು ಫುಲ್ ಗೊಂದಲದಲ್ಲಿದ್ದರೆ ಇದರ ಲಾಭ ಪಡೆದ ಸ್ಟಾಕ್ಹೋಮ್ ಸೂಪರ್ ಕಿಂಗ್ಸ್ ತಂಡದ ಆಟಗಾರರು ನಾಲ್ಕು ರನ್ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವಿಡಿಯೋ ಶೇರ್ ಮಾಡಿರುವ ಮೈಕೆಲ್, ನಿಜವಾದ ಕ್ರಿಕೆಟ್ ಅಂದರೆ ಇದು ಎಂದು ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.