ತಮ್ಮ ಜೀವನ ಚರಿತ್ರೆ ಆಧಾರಿತ ಸಿನಿಮಾ ಸಂಬಂಧ ಉಂಟಾಗಿರೋ ವಿವಾದಕ್ಕೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಸ್ಪಷ್ಟನೆ ನೀಡಿದ್ದಾರೆ.
ತಮಿಳು ಭಾಷೆಯಲ್ಲಿ ಮೂಡಿ ಬರುತ್ತಿರುವ ಸಿನಿಮಾ 800 ಮುತ್ತಯ್ಯ ಮುರಳೀಧರನ್ ಜೀವನ ಆಧಾರಿತ ಚಿತ್ರ. ಆದರೆ ಈ ಹಿಂದೆ ಮುತ್ತಯ್ಯ ಮುರಳೀದರನ್ ಶ್ರೀಲಂಕಾದಲ್ಲಿ ನಡೆದಿದ್ದ ತಮಿಳಿಗರ ಹತ್ಯೆಯನ್ನ ಸಂಭ್ರಮಿಸಿದ್ದರು . ಹೀಗಾಗಿ ತಮಿಳು ಭಾಷೆಯಲ್ಲಿ ಮುತ್ತಯ್ಯ ಮುರಳೀಧರನ್ ಅವರ ಜೀವನ ಚರಿತ್ರೆ ಮಾಡೋದು ಬೇಡ ಅಂತಾ ಅನೇಕರು ಆಗ್ರಹಿಸಿದ್ದಾರೆ.
ಈ ರಾಜಕೀಯ ವಿವಾದದ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಾಜಿ ಆಟಗಾರ ಮುತ್ತಯ್ಯ ಮುರುಳೀಧರನ್, 2009 ರಲ್ಲಿ ದ್ವೀಪ ರಾಷ್ಟ್ರದಲ್ಲಿ ದಶಕಗಳ ಕಾಲ ನಡೆದ ಯುದ್ಧ ಕೊನೆಗೊಂಡ ದಿನವನ್ನ ನಾನು ಅತ್ಯಂತ ಸಂತೋಷದ ದಿನ ಎಂದು ಹೇಳಿದೆ. ಮುಗ್ಧರನ್ನ ಕೊಲ್ಲುವುದನ್ನ ನಾನು ಎಂದಿಗೂ ಬೆಂಬಲಿಸುವುದಿಲ್ಲ. ಯುದ್ಧದ ನೋವನ್ನ ನಾನೂ ಅನುಭವಿಸಿದ್ದೇನೆ. ಯುದ್ಧದ ಮಧ್ಯೆಯೇ ನಾನು ಬೆಳೆದಿದ್ದೇನೆ. ನಾನು ಏಳು ವರ್ಷದವನಿದ್ದಾಗ ನನ್ನ ತಂದೆಯನ್ನ ಅಪಹರಿಸಲಾಯ್ತು. ನಾವು ಬೀದಿಗೆ ಬಿದ್ದ ದಿನಗಳನ್ನೂ ಕಂಡಿದ್ದೇನೆ ಅಂತಾ ಹೇಳಿಕೊಂಡಿದ್ದಾರೆ.