ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ತಾವು ಹಾಗೂ ತಂಡದ ಇನ್ನಿಬ್ಬರು ಆಟಗಾರರು ತಂತಮ್ಮ ಹೆಣ್ಣುಮಕ್ಕಳೊಂದಿಗೆ ಇರುವ ಚಿತ್ರವೊಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ರೋಹಿತ್ ಹಾಗೂ ಮಗಳು ಸಮೈರಾ, ಆದಿತ್ಯ & ಮಗಳು ರಬ್ಬಾನಿ ಹಾಗೂ ಧವಳ್ ಕುಲಕರ್ಣಿ & ಮಗಳು ನಿತಾರಾ ಜೊತೆಯಲ್ಲಿ ನಿಂತಿದ್ದು ಅವರ ಮುಂದೆ ಕೇಕ್ ಒಂದನ್ನು ಇಟ್ಟಿರುವುದನ್ನು ಚಿತ್ರದಲ್ಲಿ ನೋಡಬಹುದಾಗಿದೆ.
ಮೊದಲ ತಂಡವಾಗಿ ಐಪಿಎಲ್ ಫೈನಲ್ ಪ್ರವೇಶಿಸಿರುವ ಮುಂಬೈ ಇಂಡಿಯನ್ಸ್, ಬಿಡುವಿನ ಅವಧಿಯಲ್ಲಿ ತನ್ನ ಆಟಗಾರರಿಗೆ ಹೀಗೆ ಕುಟುಂಬಗಳೊಂದಿಗೆ ಜಾಲಿ ಮಾಡಲು ಅವಕಾಶ ಕೊಟ್ಟಿದೆ.