
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ರವೀಂದ್ರ ಜಡೇಜಾ ಫೀಲ್ಡಿಂಗ್ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ತೋರಿದ್ರು. ಇದೇ ಕಾರಣಕ್ಕೆ ಮಹೇಂದ್ರ ಸಿಂಗ್ ಧೋನಿ ಕಳೆದ 8 ವರ್ಷಗಳ ಹಿಂದೆ ಮಾಡಿದ ಟ್ವೀಟ್ ಭಾರೀ ವೈರಲ್ ಆಗ್ತಿದೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಮಾತ್ರವಲ್ಲದೇ ಫೀಲ್ಡಿಂಗ್ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿದ್ದ ಜಡೇಜಾ ಬರೋಬ್ಬರಿ ನಾಲ್ಕು ಕ್ಯಾಚ್ಗಳನ್ನ ಹಿಡಿಯುವಲ್ಲಿ ಯಶಸ್ವಿಯಾದ್ರು.
ಇದೇ ಕಾರಣಕ್ಕೆ ಧೋನಿ 2013ರಲ್ಲಿ ಮಾಡಿದ ಟ್ವೀಟ್ ಮತ್ತೆ ವೈರಲ್ ಆಗಿದೆ. ಸರ್ ಜಡೇಜಾ ಕ್ಯಾಚ್ ಹಿಡಿಯಲು ಓಡೋದಿಲ್ಲ. ಬದಲಾಗಿ ಚೆಂಡು ಅವರ ಕೈಗೆ ಬಂದು ಬೀಳುತ್ತೆ ಎಂದು ಧೋನಿ ಬರೆದಿದ್ದಾರೆ.
ತವರು ರಾಜ್ಯದಲ್ಲಿ ಒಂದೇ ಒಂದು ಪಂದ್ಯವನ್ನ ಆಡದೇ ಇದ್ದರೂ ಸಹ ಸಿಎಸ್ಕೆ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವನ್ನ ಸಾಧಿಸಿ ಪಾಯಿಂಟ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿದೆ.
ಧೋನಿ ಇನ್ನೂ ತಮ್ಮ ಉನ್ನತ ಫಾರ್ಮ್ನ್ನು ಪ್ರದರ್ಶನ ಮಾಡಿಲ್ಲ. ಆದರೆ ಜಡೇಜಾ ಮಾತ್ರ ಬೌಲಿಂಗ್, ಬ್ಯಾಟಿಂಗ್ ಮಾತ್ರವಲ್ಲದೇ ಫೀಲ್ಡಿಂಗ್ ವಿಭಾಗದಲ್ಲೂ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಸಿಎಸ್ಕೆ ಅಭಿಮಾನಿಗಳಿಗೆ ಜಡೇಜಾ ಮೇಲಿನ ನಿರೀಕ್ಷೆ ಹೆಚ್ಚುತ್ತಿದೆ.