alex Certify ಈ ಕಾರಣಕ್ಕೆ ವೈರಲ್​ ಆಗಿದೆ 8 ವರ್ಷ ಹಿಂದಿನ ಧೋನಿ ಟ್ವೀಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ವೈರಲ್​ ಆಗಿದೆ 8 ವರ್ಷ ಹಿಂದಿನ ಧೋನಿ ಟ್ವೀಟ್​..!

ಸೋಮವಾರ ಚೆನ್ನೈ ಸೂಪರ್​ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 45 ರನ್​ಗಳ ಅಂತರದಲ್ಲಿ ಭರ್ಜರಿ ಗೆಲುವನ್ನ ದಾಖಲಿಸಿದೆ.

ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಆಟಗಾರ ರವೀಂದ್ರ ಜಡೇಜಾ ಫೀಲ್ಡಿಂಗ್​ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ತೋರಿದ್ರು. ಇದೇ ಕಾರಣಕ್ಕೆ ಮಹೇಂದ್ರ ಸಿಂಗ್​ ಧೋನಿ ಕಳೆದ 8 ವರ್ಷಗಳ ಹಿಂದೆ ಮಾಡಿದ ಟ್ವೀಟ್​ ಭಾರೀ ವೈರಲ್​ ಆಗ್ತಿದೆ.

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ವಿಭಾಗದಲ್ಲಿ ಮಾತ್ರವಲ್ಲದೇ ಫೀಲ್ಡಿಂಗ್​ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರಿದ್ದ ಜಡೇಜಾ ಬರೋಬ್ಬರಿ ನಾಲ್ಕು ಕ್ಯಾಚ್​ಗಳನ್ನ ಹಿಡಿಯುವಲ್ಲಿ ಯಶಸ್ವಿಯಾದ್ರು.

ಇದೇ ಕಾರಣಕ್ಕೆ ಧೋನಿ 2013ರಲ್ಲಿ ಮಾಡಿದ ಟ್ವೀಟ್​​ ಮತ್ತೆ ವೈರಲ್​ ಆಗಿದೆ. ಸರ್ ಜಡೇಜಾ ಕ್ಯಾಚ್​ ಹಿಡಿಯಲು ಓಡೋದಿಲ್ಲ. ಬದಲಾಗಿ ಚೆಂಡು ಅವರ ಕೈಗೆ ಬಂದು ಬೀಳುತ್ತೆ ಎಂದು ಧೋನಿ ಬರೆದಿದ್ದಾರೆ.

ತವರು ರಾಜ್ಯದಲ್ಲಿ ಒಂದೇ ಒಂದು ಪಂದ್ಯವನ್ನ ಆಡದೇ ಇದ್ದರೂ ಸಹ ಸಿಎಸ್​ಕೆ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವನ್ನ ಸಾಧಿಸಿ ಪಾಯಿಂಟ್​ ಟೇಬಲ್​ನಲ್ಲಿ ಎರಡನೇ ಸ್ಥಾನದಲ್ಲಿದೆ.

ಧೋನಿ ಇನ್ನೂ ತಮ್ಮ ಉನ್ನತ ಫಾರ್ಮ್​ನ್ನು ಪ್ರದರ್ಶನ ಮಾಡಿಲ್ಲ. ಆದರೆ ಜಡೇಜಾ ಮಾತ್ರ ಬೌಲಿಂಗ್​, ಬ್ಯಾಟಿಂಗ್​ ಮಾತ್ರವಲ್ಲದೇ ಫೀಲ್ಡಿಂಗ್​ ವಿಭಾಗದಲ್ಲೂ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಸಿಎಸ್​ಕೆ ಅಭಿಮಾನಿಗಳಿಗೆ ಜಡೇಜಾ ಮೇಲಿನ ನಿರೀಕ್ಷೆ ಹೆಚ್ಚುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...