alex Certify ಮತ್ತೆ ಹೇರ್ ಸ್ಟೈಲ್ ಬದಲಿಸಿ ಸುದ್ದಿಗೆ ಬಂದ ಕೂಲ್ ಕ್ಯಾಪ್ಟನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಹೇರ್ ಸ್ಟೈಲ್ ಬದಲಿಸಿ ಸುದ್ದಿಗೆ ಬಂದ ಕೂಲ್ ಕ್ಯಾಪ್ಟನ್

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದರೂ ಮಾಜಿ ನಾಯಕ ಎಂ.ಎಸ್. ಧೋನಿಯ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಧೋನಿ ಪ್ರತಿಯೊಂದು ಕೆಲಸವನ್ನು ಅಭಿಮಾನಿಗಳು ಗಮನಿಸುತ್ತಿರುತ್ತಾರೆ.

ಅಭಿಮಾನಿಗಳನ್ನು ನಿರಾಸೆಗೊಳಿಸದ ಧೋನಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡುವ ಧೋನಿ ಫ್ಯಾಷನ್ ವಿಷ್ಯದಲ್ಲೂ ಹಿಂದೆ ಬಿದ್ದಿಲ್ಲ. ಧೋನಿ ಈಗ ಮತ್ತೆ ಹೇರ್ ಸ್ಟೈಲ್ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

ಧೋನಿ ಮತ್ತೊಮ್ಮೆ ತಮ್ಮ ಹೇರ್ ಸ್ಟೈಲ್ ಬದಲಿಸಿದ್ದಾರೆ. ಹೊಸ ಹೇರ್ ಸ್ಟೈಲ್ ಧೋನಿಗೆ ಸೂಕ್ತವಾಗಿದೆ. ಇದು ಅಭಿಮಾನಿಗಳಿಗೂ ಇಷ್ಟವಾಗಿದೆ. ಉದ್ದ ಕೂದಲಿನ ಮೂಲಕವೇ ಅಭಿಮಾನಿಗಳನ್ನು ಸೆಳೆದವರು ಧೋನಿ. ಆಗ ಧೋನಿ ಹೇರ್ ಸ್ಟೈಲ್ ಹೆಚ್ಚು ಪ್ರಸಿದ್ಧಿಯಾಗಿತ್ತು.

ಧೋನಿಯ ಈಗಿನ ಹೇರ್ ಸ್ಟೈಲ್ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವೀಟರ್ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಧೋನಿ ಫೋಟೋವನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ನಂತ್ರ ಧೋನಿ ಐಪಿಎಲ್ ನಲ್ಲಿ ಕಾಣಿಸಿಕೊಂಡಿದ್ದರು. ಆದಾದ ಮೇಲೆ ಧೋನಿ ಕುಟುಂಬದವರು, ಸ್ನೇಹಿತರ ಜೊತೆ ಬಿಡುವಿನ ಸಮಯ ಕಳೆಯುತ್ತಿದ್ದಾರೆ. ಸಾವಯವ ಕೃಷಿಯನ್ನು ಅವ್ರು ಶುರು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...