
ಆದರೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಮಾತ್ರ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆಯನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಲ್ಲ. ಮೊದಲಿನಿಂದಲೂ ಸೋಶಿಯಲ್ ಮೀಡಿಯಾದಿಂದ ಅಂತರ ಕಾಯ್ದುಕೊಂಡು ಬಂದಿರುವ ಧೋನಿ ಈ ವಿಚಾರದಲ್ಲಿಯೂ ತಮ್ಮ ಅಭ್ಯಾಸವನ್ನ ಮುಂದುವರಿಸಿದ್ದಾರೆ.
ಆದರೆ ಯಾವುದೇ ಟ್ವೀಟ್ ಮಾಡದೆಯೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ ಕ್ಯಾಪ್ಟನ್ ಕೂಲ್..! ಈ ವಿಚಾರದಲ್ಲಿ ಧೋನಿ ಏಕೆ ಮೌನ ತಾಳಿದ್ದಾರೆ ಅಂತಾ ಅನೇಕರು ಪ್ರಶ್ನೆ ಮಾಡಿದ್ದರೆ ಇನ್ನೂ ಕೆಲವರು ಧೋನಿ ಕ್ರಿಕೆಟ್ ಆಟಗಾರನಾಗಿ, ಭಾರತೀಯ ಸೇನೆಯಲ್ಲೂ ಸೇವೆ ಸಲ್ಲಿಸಿ, ಸ್ವತಃ ಒಬ್ಬ ರೈತನಾಗಿ ದೇಶಕ್ಕೆ ಅವರದ್ದೇ ಆದ ಕೊಡುಗೆ ಕೊಟ್ಟಿದ್ದಾರೆ ಎಂದು ಸಮರ್ಥನೆ ನೀಡಿದ್ದಾರೆ.
https://twitter.com/DhoniTamilFC/status/1357180637480845312
https://twitter.com/neophyte420/status/1357185232600850437