alex Certify ಧೋನಿ ನಗುವಿಗೆ ಅಭಿಮಾನಿಗಳು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೋನಿ ನಗುವಿಗೆ ಅಭಿಮಾನಿಗಳು ಫಿದಾ

MS Dhoni

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಗೆ ಸಿದ್ಧವಾಗ್ತಿದ್ದಾರೆ. ಯುಎಇಯಲ್ಲಿ ನಡೆಯುವ ಐಪಿಎಲ್ ನಲ್ಲಿ ಧಮಾಲ್ ಮಾಡಲು ಕಾಯ್ತಿದ್ದಾರೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್, ಧೋನಿ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಈ ಫೋಟೋದಲ್ಲಿ  ಧೋನಿ ಕಿಟ್ ಬ್ಯಾಗ್ ಹಿಡಿದು ಸ್ಮೈಲ್ ಮಾಡಿದ್ದಾರೆ. ಧೋನಿ ನಗು ಎಲ್ಲರನ್ನು ಸೆಳೆದಿದೆ. ಈ ನಗುವಿಗಾಗಿ ಇನ್ನು ಕಾಯಲು ಸಾಧ್ಯವಿಲ್ಲವೆಂದು ಚೆನ್ನೈ ಸೂಪರ್ ಕಿಂಗ್ಸ್ ಶೀರ್ಷಿಕೆ ಹಾಕಿದೆ.

ಐಪಿಎಲ್ ಪಂದ್ಯಕ್ಕಾಗಿ ಎಲ್ಲ ತಂಡಗಳು ಯುಎಇ ತಲುಪಿವೆ. ಸೆಪ್ಟೆಂಬರ್ 19ರಿಂದ ಪಂದ್ಯಗಳು ಶುರುವಾಗಲಿವೆ. ಅನೇಕ ದಿನಗಳಿಂದ ಮೈದಾನಕ್ಕಿಳಿಯದ ಧೋನಿ ಆಟವನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಧೋನಿ ಈವರೆಗೆ 190 ಐಪಿಎಲ್ ಪಂದ್ಯಗಳನ್ನಾಡಿದ್ದು, 4432 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರ ಅತ್ಯುತ್ತಮ ಸ್ಕೋರ್ 84 ರನ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...