alex Certify ಸುಶಾಂತ್ ನೆನಪಲ್ಲಿ ಧೋನಿ ಅಭಿಮಾನಿಗಳು ಮಾಡಿರುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಶಾಂತ್ ನೆನಪಲ್ಲಿ ಧೋನಿ ಅಭಿಮಾನಿಗಳು ಮಾಡಿರುವ ವಿಡಿಯೋ ವೈರಲ್

ಅಕಾಲಿಕ ಮರಣಕ್ಕೆ ತುತ್ತಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನೆನಪು ಇನ್ನೂ ಮಾಸಿಲ್ಲ. ಅದರಲ್ಲೂ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಹುಟ್ಟಿದ ದಿನವಾದ ಸೋಮವಾರ, ಸುಶಾಂತ್ ನೆನಪು ತುಂಬಾ ಕಾಡಿದೆ.

ಧೋನಿ ಹುಟ್ಟಿದ ಹಬ್ಬದಂದು ಸುಶಾಂತ್ ನನ್ನು ಜ್ಞಾಪಿಸಿಕೊಂಡಿರುವ ಧೋನಿ ಹುಡುಗರು, ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ವರ್ಣಚಿತ್ರವೊಂದನ್ನು ರಚಿಸಿ, ವಿಡಿಯೋ ಮಾಡಿರುವ ಧೋನಿ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಳದಿ ಬಣ್ಣದ ಜೆರ್ಸಿ ತೊಟ್ಟಿರುವ ಧೋನಿ ಮೋಡ ನೋಡುತ್ತಾ ನಿಂತಿದ್ದಾರೆ. ಮೋಡದ ಮೇಲೆ 7ನೇ ನಂಬರಿನ ನೀಲಿ ಜೆರ್ಸಿ ತೊಟ್ಟು ನಿಂತಿರುವ ಸುಶಾಂತ್ ಕಾಣುತ್ತಾರೆ. ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಅಶ್ರುತರ್ಪಣ ಅರ್ಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...