ಕೋವಿಡ್ 19 ಸೋಂಕು ವಿಶ್ವಕ್ಕೆ ಬಂದು ಅಪ್ಪಳಿಸಿದ ಬಳಿಕ ಜನರು ಒಂದೆಡೆ ಸೇರುವುದೇ ಕಡಿಮೆಯಾಗಿದೆ. ಈ ನಡುವೆ ಮೆಲ್ಬೋರ್ನ್ ಕ್ರಿಕೆಟ್ ಅಂಗಳದಲ್ಲಿ ನಡೆದ ಫುಟ್ಬಾಲ್ ಪಂದ್ಯದಲ್ಲಿ ಬರೋಬ್ಬರಿ 78 ಸಾವಿರ ವೀಕ್ಷಕರು ಮೈದಾನಕ್ಕೆ ಆಗಮಿಸಿದ್ದರು. ಕೋವಿಡ್ 19 ಬಳಿಕ ಇದೇ ಮೊದಲ ಬಾರಿಗೆ ಕಂಡ ಅತ್ಯಂತ ದೊಡ್ಡ ಜನದಟ್ಟಣೆ ಇದಾಗಿದೆ.
ಕಾಲಿಂಗ್ ವುಡ್ ಮ್ಯಾಗ್ಪೈಸ್ ಹಾಗೂ ಎಸೆಂಡೊನ್ ಬಾಂಬರ್ಸ್ ನಡುವೆ ನಡೆದ ಪಂದ್ಯವನ್ನ 78,113 ಮಂದಿ ಪ್ರೇಕ್ಷಕರು ವೀಕ್ಷಿಸಿದ್ದಾರೆ. ಈ ಕ್ರಿಕೆಟ್ ಮೈದಾನದಲ್ಲಿ 1 ಲಕ್ಷ ಮಂದಿಗೆ ಕುಳಿತುಕೊಳ್ಳಲು ವ್ಯವಸ್ಥೆ ಇದೆ. ಎಂಜಿಸಿ ಮೈದಾನದಲ್ಲಿ 85 ಪ್ರತಿಶತ ವೀಕ್ಷಕರ ಹಾಜರಾತಿಗೆ ಅವಕಾಶ ನೀಡಲಾಗಿತ್ತು.
ಈ ಮೂಲಕ 75 ಪ್ರತಿಶತ ಟಿಕೆಟ್ ಮಾರಾಟಕ್ಕೆ ಅವಕಾಶ ನೀಡಿದ್ದ ಅಧಿಕಾರಿಗಳು ಬಳಿಕ ಈ ಮಿತಿಯನ್ನ 85 ಪ್ರತಿಶತಕ್ಕೆ ಏರಿಕೆ ಮಾಡಿದ್ರು.
22 ವರ್ಷಗಳ ನಂತ್ರ ತಾಯಿ –ಮಗನನ್ನು ಒಂದಾಗಿಸಿದ ಕೊರೋನಾ
ಕಳೆದ ತಿಂಗಳು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ 2 ಟಿ 20 ಪಂದ್ಯದಲ್ಲಿ ಕ್ರಮವಾಗಿ 67,200 ಹಾಗೂ 66,352 ಮಂದಿ ಹಾಜರಾಗಿದ್ದರು. ಆದರೆ ಎಂಜಿಸಿ ಮೈದಾನ ಈ ದಾಖಲೆಯನ್ನೂ ಮೀರಿಸಿದೆ. ಎಂಜಿಸಿ ಮೈದಾನದಲ್ಲಿ ಉಂಟಾಗಿದ್ದ ಜನದಟ್ಟಣೆಯ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿವೆ.