alex Certify ಮರಡೋನಾಗೆ ʼಹ್ಯಾಂಡ್‌ ಆಫ್‌ ಗಾಡ್ʼ ಬಿರುದು ಬಂದಿದ್ದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಡೋನಾಗೆ ʼಹ್ಯಾಂಡ್‌ ಆಫ್‌ ಗಾಡ್ʼ ಬಿರುದು ಬಂದಿದ್ದರ ಹಿಂದಿದೆ ಈ ಕಾರಣ

ಫುಟ್​ಬಾಲ್​ ದಂತಕತೆ ಡಿಯಾಗೋ ಮರಡೋನಾ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅರ್ಜೆಂಟೀನಾದ ಫುಟ್​ಬಾಲ್​ ಆಟಗಾರನಾಗಿದ್ದ ಮರಡೋನಾ ಹೃದಾಯಾಘಾತದಿಂದ ತಮ್ಮ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೆದುಳು ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮರಡೊನಾ ಕೆಲ ವಾರಗಳ ಹಿಂದಷ್ಟೇ ಆಸ್ಪತ್ರೆಯಿಂದ ಮನೆಗೆ ವಾಪಸ್ಸಾಗಿದ್ರು.

ಫುಟ್​ಬಾಲ್​ ದಂತಕತೆಯ ನಿಧನಕ್ಕೆ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಕಂಬನಿ ಮಿಡಿದಿದ್ದಾರೆ.

1986, ಜೂನ್​ 22ರ ಇಂಗ್ಲೆಡ್​ ವಿರುದ್ಧದ ಫುಟ್​ಬಾಲ್​ ವಿಶ್ವಕಪ್​ನ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ಮರಡೋನಾ ಗೋಲು ಬಾರಿಸಿದ ಪರಿಯಿಂದಾಗಿ ಅವರ ಕೈಗಳನ್ನ ‌ʼಹ್ಯಾಂಡ್‌ ಆಫ್‌ ಗಾಡ್ʼ ಅಂತಾನೆ ಕರೆಯಲಾಗುತ್ತಿತ್ತು.

ಫುಟ್​​ಬಾಲ್​ನಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿದ ಮರಡೋನಾ ಇದೀಗ ಅಭಿಮಾನಿಗಳನ್ನ ಅಗಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 1986ರಲ್ಲಿ ಮರಡೋನಾ ಬಹುದೊಡ್ಡ ಬಿರುದು ತಂದುಕೊಟ್ಟ ಆ ಪಂದ್ಯದ ತುಣುಕುಗಳನ್ನ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚಾಗಿ ಶೇರ್​ ಮಾಡುತ್ತಿದ್ದಾರೆ.

— Paul Stevenson (@paul_stevenson) November 25, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...