
ಮೆದುಳು ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮರಡೊನಾ ಕೆಲ ವಾರಗಳ ಹಿಂದಷ್ಟೇ ಆಸ್ಪತ್ರೆಯಿಂದ ಮನೆಗೆ ವಾಪಸ್ಸಾಗಿದ್ರು.
ಫುಟ್ಬಾಲ್ ದಂತಕತೆಯ ನಿಧನಕ್ಕೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಂಬನಿ ಮಿಡಿದಿದ್ದಾರೆ.
1986, ಜೂನ್ 22ರ ಇಂಗ್ಲೆಡ್ ವಿರುದ್ಧದ ಫುಟ್ಬಾಲ್ ವಿಶ್ವಕಪ್ನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಮರಡೋನಾ ಗೋಲು ಬಾರಿಸಿದ ಪರಿಯಿಂದಾಗಿ ಅವರ ಕೈಗಳನ್ನ ʼಹ್ಯಾಂಡ್ ಆಫ್ ಗಾಡ್ʼ ಅಂತಾನೆ ಕರೆಯಲಾಗುತ್ತಿತ್ತು.
ಫುಟ್ಬಾಲ್ನಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿದ ಮರಡೋನಾ ಇದೀಗ ಅಭಿಮಾನಿಗಳನ್ನ ಅಗಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ 1986ರಲ್ಲಿ ಮರಡೋನಾ ಬಹುದೊಡ್ಡ ಬಿರುದು ತಂದುಕೊಟ್ಟ ಆ ಪಂದ್ಯದ ತುಣುಕುಗಳನ್ನ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಶೇರ್ ಮಾಡುತ್ತಿದ್ದಾರೆ.