ಫೆಬ್ರವರಿ 8ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್ ಟೂರ್ನಮೆಂಟ್ ಸಲುವಾಗಿ ಮೆಲ್ಬೋರ್ನ್ನಲ್ಲಿ ಆಟಗಾರರನ್ನ ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ ಓಪನ್ ಟೂರ್ನಮೆಂಟ್ನಲ್ಲಿ ಭಾಗವಹಿಸಬೇಕಿದ್ದ ನಾಲ್ವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಗ್ರ್ಯಾಂಡ್ ಸ್ಲ್ಯಾಮ್ನ ಅರ್ಹತಾ ಪಂದ್ಯ ನಡೆದ ದೋಹಾದಿಂದ 58 ಪ್ರಯಾಣಿಕರನ್ನ ಕರೆದೊಯ್ಯುವ ಮೂರನೇ ವಿಮಾನದಲ್ಲಿದ್ದ ನಾಲ್ವರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
72 ಆಟಗಾರರು ಹಾಗೂ ಅವರ ಸಹವರ್ತಿಗಳಿಗೆ ಮೆಲ್ಬೋರ್ನ್ನ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಆಟಗಾರರಿದ್ದ ವಿಮಾನದಲ್ಲಿ ಸೋಂಕು ವರದಿಯಾದ ಕಾರಣ ತರಬೇತಿಗೆ ಬಿಡಲು ಸಾಧ್ಯವಿಲ್ಲ ಎಂದು ಕ್ವಾರಂಟೈನ್ ಮಾಡಲಾಗಿದೆ. ಆದರೆ ಹೋಟೆಲ್ ಅವ್ಯವಸ್ಥೆ ಬಗ್ಗೆ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋಟೆಲ್ನ ಆಹಾರದ ಗುಣಮಟ್ಟವನ್ನ ಕಂಡು ಅನೇಕ ಟೆನ್ನಿಸ್ ತಾರೆಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವ ಟೆನ್ನಿಸ್ನ 15ನೇ ಕ್ರಮಾಂಕದ ಸ್ಪೇನ್ ಕ್ಯಾರೆನೋ ಬುಸ್ಟಾ ಸಲಾಡ್, ಸೇಬು ಹಾಗೂ ಜ್ಯೂಸ್ ಕಪ್ಗಳ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಹೋಟೆಲ್ನಲ್ಲಿ ಆಹಾರದ ವ್ಯವಸ್ಥೆ ಸರಿಯಿಲ್ಲದ ಕಾರಣ ಫ್ರಾನ್ಸ್ನ ವಿಶ್ವದ ನಂ 28ರ ಆಟಗಾರ ಪೈರ್ ಮೆಕ್ ಡೊನಾಲ್ಡ್ನಿಂದ ತಿನಿಸನ್ನ ತರಿಸಿಕೊಂಡಿದ್ದಾರೆ.
ಇನ್ನು ಮಹಿಳಾ ಟೆನ್ನಿಸ್ನ 71ನೇ ಕ್ರಮಾಂಕದ ಸೊರೊನಾ ಕಸ್ರ್ಟಿಯಾ, ನಿಜಕ್ಕೂ ಈ ಎಲ್ಲಾ ನಿಯಮಗಳಿವೆ ಎಂದು ಮೊದಲೇ ತಿಳಿದಿದ್ದರೆ ನಾನು ಆಸ್ಟ್ರೇಲಿಯಾಗೆ ಬರುತ್ತಲೇ ಇರಲಿಲ್ಲ, ಮನೆಯಲ್ಲೇ ಇರ್ತಿದ್ದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.