alex Certify RCB ಗೆ ರೋಚಕ ಜಯ, ಕ್ವಾಲಿಫೈಯರ್ -2ಕ್ಕೆ ಎಂಟ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RCB ಗೆ ರೋಚಕ ಜಯ, ಕ್ವಾಲಿಫೈಯರ್ -2ಕ್ಕೆ ಎಂಟ್ರಿ

ಕೊಲ್ಕೊತ್ತಾ: ಕೊಲ್ಕೊತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಳೆಯಿಂದಾಗಿ 40 ನಿಮಿಷ ತಡವಾಗಿ ಆರಂಭವಾದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ರನ್ ಗಳಿಂದ ಲಖ್ನೋ ಸೂಪರ್ ಜಯಿಂಟ್ಸ್ ತಂಡವನ್ನು ಸೋಲಿಸಿ 15ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ.

ಆರ್ಸಿಬಿ ಪರವಾಗಿ ರಜತ್ ಪಾಟಿದಾರ್ ಸ್ಫೋಟಕ ಶತಕ ಸಿಡಿಸಿದ್ದಾರೆ. ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್ಸಿಬಿ 20 ಓವರುಗಳಲ್ಲಿ 4 ವಿಕೆಟ್ ಗೆ 207 ರನ್ ಗಳಿಸಿತು. ವಿರಾಟ್ ಕೊಹ್ಲಿ 25, ಫಾಫ್ ಡು ಪ್ಲೆಸಿಸ್ 0, ರಜತ್ ಪಾಟಿದಾರ್ ಅಜೇಯ 112, ಮ್ಯಾಕ್ಸ್ವೆಲ್ 9, ಮಹಿಪಾಲ್ 14, ದಿನೇಶ್ ಕಾರ್ತಿಕ್ 37 ರನ್ ಗಳಿಸಿದರು.

ಗೆಲುವಿನ ಗುರಿ ಬೆನ್ನತ್ತಿದ ಲಖ್ನೋ ತಂಡ 20 ಓವರುಗಳಲ್ಲಿ 6 ವಿಕೆಟ್ ಗೆ 193 ರನ್ ಗಳಿಸಿತು. ಕೆ.ಎಲ್. ರಾಹುಲ್ 79, ದೀಪಕ್ ಹೂಡ 45 ರನ್ ಗಳಿಸಿದರು. ಆರ್ಸಿಬಿ ಪರವಾಗಿ ಜೋಶ್ ಹೇಜಲ್ ವುಡ್ 3 ವಿಕೆಟ್ ಪಡೆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...