
ದುಬೈ: ಮುಂದಿನ ಐಪಿಎಲ್ ಸೀಸನ್ ಗೆ ಎರಡು ಹೊಸ ತಂಡಗಳು ಸೇರ್ಪಡೆಯಾಗಿವೆ. ಲಖ್ನೋ ಮತ್ತು ಅಹಮದಾಬಾದ್ ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ.
ಆರ್.ಪಿ. ಸಂಜೀವ್ ಗೋಯೆಂಕಾ ಗ್ರೂಪ್ ಲಖ್ನೋ ತಂಡವನ್ನು ಖರೀದಿಸಿದೆ. 7090 ಕೋಟಿ ರೂ.ಗೆ ಲಖ್ನೋ ತಂಡವನ್ನು ಆರ್.ಪಿ. ಸಂಜೀವ್ ಗೋಯೆಂಕಾ ಗ್ರೂಪ್ ಖರೀದಿಸಿದೆ.
ಸಿವಿಸಿ ಕ್ಯಾಪಿಟಲ್ ಪಾರ್ಟನರ್ಸ್ 5635 ಕೋಟಿ ರೂ.ಗೆ ಅಹಮದಾಬಾದ್ ತಂಡವನ್ನು ಖರೀದಿಸಿದೆ. ಮುಂದಿನ ಐಪಿಎಲ್ ಸೀಸನ್ ನಲ್ಲಿ ತಂಡಗಳ ಸಂಖ್ಯೆ 10 ಕ್ಕೇರಿದೆ.