alex Certify ಕಂಬಳದ ವೇಗದ ವೀರ ಶ್ರೀನಿವಾಸ ಗೌಡರಿಂದ ಮತ್ತೊಂದು ಹೊಸ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಬಳದ ವೇಗದ ವೀರ ಶ್ರೀನಿವಾಸ ಗೌಡರಿಂದ ಮತ್ತೊಂದು ಹೊಸ ದಾಖಲೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು -ಪೆರ್ಮುಡದಲ್ಲಿ ನಡೆದ ಕಂಬಳದಲ್ಲಿ ಕಂಬಳದ ವೇಗದ ವೀರ ಖ್ಯಾತಿಯ ಶ್ರೀನಿವಾಸ ಗೌಡ ಅವರು ಹೊಸ ದಾಖಲೆ ಬರೆದಿದ್ದಾರೆ.

8.96 ಸೆಕೆಂಡ್ ನಲ್ಲಿ 100 ಮೀಟರ್ ವೇಗ ಕ್ರಮಿಸಿದ ಶ್ರೀನಿವಾಸಗೌಡ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಶನಿವಾರ ಸೂರ್ಯ -ಚಂದ್ರ ಜೋಡುಕರೆ ಕಂಬಳದಲ್ಲಿ ಮಿಜಾರು ಅಶ್ವತ್ಥಪುರ ಶ್ರೀನಿವಾಸಗೌಡ 8.96 ಸೆಕೆಂಡ್ ನಲ್ಲಿ 100 ಮೀಟರ್ ಕ್ರಮಿಸುವ ಮೂಲಕ ಇದುವರೆಗಿನ ಎಲ್ಲ ದಾಖಲೆಗಳನ್ನು ಅಳಿಸಿಹಾಕಿದ್ದಾರೆ.

ಕಂಬಳದ 125 ಮೀಟರ್ ಉದ್ದದ ಕರೆಯನ್ನು 11.21 ಸೆಕೆಂಡ್ ನಲ್ಲಿ ಅವರು ತಲುಪಿದ್ದು, ಇದನ್ನು 100 ಮೀಟರ್ ಗೆ ಲೆಕ್ಕ ಹಾಕಿದಾಗ 8.96 ಸೆಕೆಂಡ್ ನಲ್ಲಿ ಅವರು 100 ಮೀಟರ್ ತಲುಪಿದ್ದಾರೆ. ಕಳೆದ ವರ್ಷ ಶ್ರೀನಿವಾಸಗೌಡ ಅವರು 9.55 ಸೆಕೆಂಡ್ ನಲ್ಲಿ 100 ಮೀಟರ್ ಓಟದಲ್ಲಿ ದಾಖಲೆ ಬರೆದಿದ್ದರು. ಬಜಗೋಳಿ ನಿಶಾಂತ್ ಶೆಟ್ಟಿ 9.52 ಸೆಕೆಂಡ್ ನಲ್ಲಿ 100 ಮೀಟರ್ ಓಟ ಕ್ರಮಿಸಿದ್ದರು. ಬೈಂದೂರು ವಿಶ್ವನಾಥ ದೇವಾಡಿಗ ಅವರು 9.15 ಸೆಕೆಂಡ್ ನಲ್ಲಿ 100 ಮೀಟರ್ ಓಟ ಕ್ರಮಿಸಿ ದಾಖಲೆ ಬರೆದಿದ್ದು, ಇಂದು ಶ್ರೀನಿವಾಸ ಗೌಡರು ಹೊಸ ದಾಖಲೆ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...