ಟೋಕಿಯೋ: ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುವ ಒಲಿಂಪಿಕ್ಸ್ ಈಗ ಬೇರೆಯದೇ ಕಾರಣಕ್ಕೆ ಸುದ್ದಿಯಾಗುತ್ತಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಕಾಂಡೊಮ್ ಕೊಡಲಾಗಿದೆ. ಇದೇ ವೇಳೆ ಯಾರು ಸೆಕ್ಸ್ ನಲ್ಲಿ ತೊಡಗಬಾರದು ಎನ್ನುವ ಕಾರಣಕ್ಕೆ ಮುರಿಯುವ ಮಂಚಗಳನ್ನು ಹಾಕಲಾಗಿದೆ.
ಕೇವಲ ಒಬ್ಬರು ಮಲಗುವಂತೆ ಇರುವ ಮಂತ್ರಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಮುರಿದುಹೋಗುತ್ತದೆ. ಯಾರೂ ಇಂತಹ ಮಂಚಗಳ ಮೇಲೆ ಲೈಂಗಿಕಕ್ರಿಯೆ ನಡೆಸಬಾರದು ಎಂದು ಸುದ್ದಿಯಾಗಿತ್ತು.
ಇದೀಗ ಇದೇ ವಿಷಯ ತಮಾಷೆಯಾಗಿ ಪರಿಣಮಿಸಿದ್ದು, ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು ಎಂದಾದರೆ ಕಾಂಡೋಮ್ ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಲಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರೀಡಾಪಟುಗಳಿಗೆ ಸೂಚಿಸಲಾಗಿದೆ. ಕ್ರೀಡಾಪಟುಗಳು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಅಂತರ ಕಾಯ್ದುಕೊಳ್ಳುವ ಉದ್ದೇಶಕ್ಕೆ ಪೆಟ್ಟು ಬಿದ್ದಂತಾಗುತ್ತದೆ ಎಂಬ ಕಾರಣಕ್ಕೆ ಒಬ್ಬರಿಗೆ ಮಲಗಲು ಮಾತ್ರ ಸಾಧ್ಯವಾಗುವ ಮಂಚಗಳನ್ನು ನಿರ್ಮಿಸಲಾಗಿದೆ. ಇಂತಹ ಮಂಚಗಳ ಮೇಲೆ ಲೈಂಗಿಕ ಕ್ರಿಯೆ ನಡೆಸಿದರೆ ಮುರಿದು ಹೋಗುತ್ತದೆ.
ಆದರೆ, ಮಂಚಗಳು ಮುರಿಯುವುದಿಲ್ಲ ಅವು ಬಲಿಷ್ಠವಾಗಿವೆ ಎಂದು ಆಯೋಜಕರು ಹೇಳಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ 1.50 ಲಕ್ಷ ಕಾಂಡೊಮ್ ಗಳನ್ನು ಅಥ್ಲೀಟ್ ಗಳಿಗೆ ವಿತರಿಸಲಾಗಿದೆ. ಹೀಗಿದ್ದರೂ ಲೈಂಗಿಕ ಕ್ರಿಯೆ ನಡೆಸದಂತೆ ಮನವಿ ಮಾಡಲಾಗಿದ್ದು, ಅಥ್ಲೀಟ್ ಗಳು ಪರಸ್ಪರರು ದೈಹಿಕ ಸಂಪರ್ಕಕ್ಕೆ ಬರಬಾರದು ಎಂದು ನಿಯಮ ರೂಪಿಸಲಾಗಿದೆ. ಇದಕ್ಕಾಗಿಯೇ ಕಾರ್ಡ್ ಬೋರ್ಡ್ ನಿಂದ ತಯಾರಿಸಿದ ಮುರಿಯುವ ಮಂಚಗಳನ್ನು ಕೊಡಲಾಗಿದೆ ಎಂಬ ವಿಚಾರವೇ ಈಗ ಭಾರಿ ಚರ್ಚೆಗೆ ಒಳಗಾಗಿದೆ.