ಗಾಯದಿಂದ ಬಳಲುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮಂಗಳವಾರ ನಡೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಚ್ಚರಿಯ ಕಮ್ ಬ್ಯಾಕ್ ಮಾಡಿದ್ದರು.
ಆದರೆ ಅದೇ ದಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಓಪನರ್ ರೋಹಿತ್ ಶರ್ಮಾ ಗಾಯಗೊಂಡಿರೋದ್ರಿಂದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾಗಿಯಾಗಲ್ಲ ಎಂದು ಹೇಳಿದ್ದರು. ಇವರೆಡು ಘಟನೆಗಳು ಕ್ರಿಕೆಟ್ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಫಿಟ್ನೆಸ್ ಕುರಿತಂತೆ ಗೊಂದಲ ಉಂಟುಮಾಡಿತ್ತು.
ಟೀಂ ಇಂಡಿಯಾದ ಮಾಜಿ ನಾಯಕ ದಿಲೀಪ್ ವೆಂಗಸರ್ಕರ್, ಮಂಗಳವಾರ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಭಾಗಿಯಾಗಿದ್ದನ್ನ ಪ್ರಶ್ನೆ ಮಾಡಿದ್ದಾರೆ, ದೇಶವನ್ನ ಪ್ರತಿನಿಧಿಸೋದಕ್ಕಿಂತ ರೋಹಿತ್ ಶರ್ಮಾಗೆ ಐಪಿಎಲ್ ಲೀಗ್ ಹೆಚ್ಚು ಮುಖ್ಯವೇ ಅಂತಾ ಪ್ರಶ್ನೆ ಮಾಡಿದ್ದಾರೆ. ದೇಶವನ್ನ ಪ್ರತಿನಿಧಿಸುವುದಕ್ಕಿಂತ ರೋಹಿತ್ಗೆ ಲೀಗ್ ಟೀಂನ್ನ ಪ್ರತಿನಿಧಿಸೋದು ಮುಖ್ಯವಾ..? ಅಥವಾ ಬಿಸಿಸಿಐ ರೋಹಿತ್ ಶರ್ಮಾರ ಗಾಯವನ್ನ ಕಂಡು ಹಿಡಿಯೋದ್ರಲ್ಲಿ ವಿಫಲವಾಗಿದ್ಯಾ ಅಂತಾ ಪ್ರಶ್ನೆ ಮಾಡಿದ್ದಾರೆ.