alex Certify IPL: ಇಂದು RCB – ಪಂಜಾಬ್ ಕಿಂಗ್ಸ್ ಹೈವೋಲ್ಟೇಜ್ ಮ್ಯಾಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL: ಇಂದು RCB – ಪಂಜಾಬ್ ಕಿಂಗ್ಸ್ ಹೈವೋಲ್ಟೇಜ್ ಮ್ಯಾಚ್

ಮುಂಬೈ: ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ. ಉಭಯ ತಂಡಗಳಿಗೂ ಹೊಸಬರು ನಾಯಕರಾಗಿದ್ದಾರೆ.

ಸೌತ್ ಆಫ್ರಿಕಾದ ಅನುಭವಿ ಆಟಗಾರ ಫಾಫ್ ಡುಪ್ಲೆಸಿಸ್ ಆರ್ಸಿಬಿ ನಾಯಕರಾಗಿದ್ದು, ಕನ್ನಡಿಗ ಮಯಾಂಕ್ ಅಗರವಾಲ್ ಪಂಜಾಬ್ ತಂಡವನ್ನು ಮುನ್ನಡೆಸುತ್ತಾರೆ. ಇಬ್ಬರೂ ಐಪಿಎಲ್ ನಲ್ಲಿ ತಲಾ 100 ಪಂದ್ಯಗಳನ್ನು ಆಡಿದ್ದಾರೆ.

ಆರ್ಸಿಬಿ ಮತ್ತು ಪಂಜಾಬ್ ತಂಡಗಳು 28 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 13 ಪಂದ್ಯಗಳಲ್ಲಿ ಆರ್ಸಿಬಿ ಮತ್ತು 15 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಜಯಗಳಿಸಿವೆ.

ಇದುವರೆಗೆ ಐಪಿಎಲ್ ನಲ್ಲಿ ಆರ್ಸಿಬಿ 211 ಪಂದ್ಯಗಳಲ್ಲಿ 98 ರಲ್ಲಿ ಜಯ ಗಳಿಸಿದೆ. 106 ಪಂದ್ಯಗಳಲ್ಲಿ ಸೋಲು ಕಂಡಿದ್ದು, 3 ಪಂದ್ಯ ಟೈ ಆಗಿದೆ. 4 ಪಂದ್ಯಗಳ ಫಲಿತಾಂಶ ಬಂದಿಲ್ಲ.

ಪಂಜಾಬ್ ಕಿಂಗ್ಸ್ 204 ಪಂದ್ಯಗಳಲ್ಲಿ 91 ರಲ್ಲಿ ಜಯಗಳಿಸಿದ್ದು, 109 ರಲ್ಲಿ ಸೋಲು ಕಂಡಿದೆ. 3 ಪಂದ್ಯಟೈ ಆಗಿದ್ದು, 1 ಪಂದ್ಯ ಫಲಿತಾಂಶ ಬಂದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...