ಶುಕ್ರವಾರ ನಡೆದ ಮೊದಲ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ತಂಡವನ್ನ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ 19ನೇ ಓವರ್ನಲ್ಲಿ ಕ್ಯಾಚ್ ಒಂದನ್ನ ಮಿಸ್ ಮಾಡಿದ್ರು.
ಕೈಲ್ ಜಾಮಿಸನ್ ಎಸೆತಕ್ಕೆ ಕೃನಾಲ್ ಪಾಂಡ್ಯ ಬ್ಯಾಟ್ ಬೀಸಿದ್ರು. ಈ ಚೆಂಡನ್ನ ಇನ್ನೇನು ಕೊಹ್ಲಿ ಹಿಡಿಯಬೇಕು ಅನ್ನೋವಷ್ಟರಲ್ಲಿ ಚೆಂಡು ಕೊಹ್ಲಿ ಬಲಗಣ್ಣಿನ ಕೆಳಕ್ಕೆ ತಾಕಿದೆ. ಆದರೆ ಕೊಹ್ಲಿ ಮೈದಾನದಿಂದ ಹೊರಹೋಗದೇ ಇದ್ದದು ಆರ್ಸಿಬಿ ಅಭಿಮಾನಿಗಳ ಸಮಾಧಾನಕ್ಕೆ ಕಾರಣವಾಯ್ತು. ಕೊಹ್ಲಿ ಐಸ್ ಪ್ಯಾಕ್ಗಳನ್ನ ಚೆಂಡು ಬಡಿದಲ್ಲಿ ಇಟ್ಟುಕೊಂಡು ಫೀಲ್ಡಿಂಗ್ ಮುಂದುವರಿಸಿದ್ರು.
ನಿನ್ನೆಯ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ತಂಡದ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 160 ರನ್ಗಳ ಗುರಿಯನ್ನ ಆರ್ಸಿಬಿಗೆ ನೀಡಿತ್ತು. ಈ ಗುರಿಯನ್ನ ಬೆನ್ನತ್ತಿದ ಆರ್ಸಿಬಿ 2 ವಿಕೆಟ್ಗಳ ಜಯ ಸಾಧಿಸಿದೆ.
ರೋಹಿತ್ ಶರ್ಮಾ ಕೇವಲ 19 ರನ್ಗಳನ್ನ ಸೇರುವಷ್ಟರಲ್ಲಿ ರನೌಟ್ ಆದ್ರು. ಇದಾದ ಬಳಿಕ ಕ್ರಿಸ್ ಲಿನ್49, ಸೂರ್ಯ ಕುಮಾರ್ ಯಾದವ್ 31 ಹಾಗೂ ಇಶಾನ್ ಕಿಶನ್ 28 ರನ್ಗಳನ್ನ ಸಿಡಿಸುವ ಮೂಲಕ 9 ವಿಕೆಟ್ ನಷ್ಟಕ್ಕೆ 159 ರನ್ ಸೇರಿಸಿತು.
ಈ ರನ್ ಬೆನ್ನತ್ತಿದ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಗ್ಲೇನ್ ಮ್ಯಾಕ್ಸ್ವೆಲ್ ತಂಡಕ್ಕೆ ಉತ್ತಮ ಶುಭಾರಂಭ ನೀಡಿದ್ರು. ಕೊಹ್ಲಿ 33 ರನ್ ಸಿಡಿಸಿದ್ರೆ ಮ್ಯಾಕ್ಸ್ವೆಲ್ 39 ರನ್ಗಳನ್ನ ಬಾರಿಸಿದ್ರು. ಇತ್ತ ಎಬಿಡಿ ವಿಲಿಯರ್ಸ್ ಆಕರ್ಷಕ ಸಿಕ್ಸ್ ಹಾಗೂ ಬೌಂಡರಿಗಳನ್ನ ಬಾರಿಸುತ್ತಾ 48 ರನ್ಗಳನ್ನ ಸಿಡಿಸಿದ್ರು.
ಡೆತ್ ಓವರ್ನಲ್ಲಿ ಹರ್ಷಲ್ ಪಟೇಲ್ ಕೇವಲ 27 ರನ್ಗಳನ್ನ ನೀಡಿ 5 ವಿಕೆಟ್ಗಳನ್ನ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
https://twitter.com/pakas2009/status/1380550853602385923?ref_src=twsrc%5Etfw%7Ctwcamp%5Etweetembed%7Ctwterm%5E1380550853602385923%7Ctwgr%5E%7Ctwcon%5Es1_&ref_url=https%3A%2F%2Fcricketaddictor.com%2Fipl-2021%2Fwatch-virat-kohli-drops-a-sitter-off-krunal-pandyas-bat-and-hurts-himself%2F