alex Certify ಚೆನ್ನೈ ಎದುರು ಮುಗ್ಗರಿಸಿ ಬಿದ್ದ RCB –ಸತತ 5 ನೇ ಗೆಲುವಿನ ಕನಸು ಭಗ್ನ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಧೋನಿ ಬಾಯ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆನ್ನೈ ಎದುರು ಮುಗ್ಗರಿಸಿ ಬಿದ್ದ RCB –ಸತತ 5 ನೇ ಗೆಲುವಿನ ಕನಸು ಭಗ್ನ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಧೋನಿ ಬಾಯ್ಸ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 69 ರನ್ ಭರ್ಜರಿ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಎಂಎಸ್ ಧೋನಿ ನೇತೃತ್ವದ ಸಿ.ಎಸ್.ಕೆ 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ರುತುರಾಜ್ ಗಾಯಕವಾಡ್ 33,ಫಫ್ ಡು ಪ್ಲೆಸಿಸ್ 50, ಸುರೇಶ್ ರೈನಾ 24, ಅಂಬಾಟಿ ರಾಯುಡು 14, ರವೀಂದ್ರ ಜಡೇಜ ಅಜೇಯ 62, ಧೋನಿ ಅಜೇಯ 2 ರನ್ ಗಳಿಸಿದರು.

ಗೆಲುವಿನ ಗುರಿ ಬೆನ್ನತ್ತಿದ್ದ ಆರ್.ಸಿ.ಬಿ. 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿ 69 ರನ್ ಅಂತರದಿಂದ ಸೋಲು ಕಂಡಿದೆ. ವಿರಾಟ್ ಕೊಹ್ಲಿ 8, ದೇವದತ್ ಪಡಿಕಲ್ 34, ವಾಷಿಂಗ್ಟನ್ ಸುಂದರ್ 7, ಗ್ಲೆನ್ ಮ್ಯಾಕ್ಸ್ವೆಲ್ 22, ಎಬಿ ಡಿವಿಲಿಯರ್ಸ್ 4, ಡ್ಯಾನ್ ಕ್ರಿಸ್ಟಿಯನ್ 1, ಕೈಲ್ ಜೇಮಿಸನ್ 16, ಹರ್ಷಲ್ ಪಟೇಲ್ 0, ನವದೀಪ್ ಸೈನಿ 2, ಯಜುವೇಂದ್ರ ಚಾಹಲ್ ಅಜೇಯ 8, ಮೊಹಮ್ಮದ್ ಸಿರಾಜ್ ಅಜೇಯ 12 ರನ್ ಗಳಿಸಿದ್ದಾರೆ. ರವೀಂದ್ರ ಜಡೇಜ 3, ಇಮ್ರಾನ್ ತಾಹೀರ್ 2 ವಿಕೆಟ್ ಪಡೆದಿದ್ದಾರೆ. ಈ ಗೆಲುವಿನೊಂದಿಗೆ ಸಿ.ಎಸ್.ಕೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...