alex Certify ವಿರಾಟ್​ ಕೊಹ್ಲಿ ಪರ ಬ್ಯಾಟ್​ ಬೀಸಿದ ವಿರೇಂದ್ರ ಸೆಹ್ವಾಗ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರಾಟ್​ ಕೊಹ್ಲಿ ಪರ ಬ್ಯಾಟ್​ ಬೀಸಿದ ವಿರೇಂದ್ರ ಸೆಹ್ವಾಗ್​

ಎಲಿಮಿನೇಟರ್​ ಪಂದ್ಯದಲ್ಲಿ ಸೋತು ಐಪಿಎಲ್​ ಆವೃತ್ತಿಯಿಂದ ಆರ್​ಸಿಬಿ ಹೊರಬಿದ್ದ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಕೊಹ್ಲಿ ಆರ್​ಸಿಬಿ ತಂಡದ ನಾಯಕನಾಗಿ ಮುಂದುವರಿಯೋದು ಸರಿಯೇ ಎಂಬ ಪ್ರಶ್ನೆಯನ್ನ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಎತ್ತಿದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ.

ಆದರೆ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಮಾತ್ರ ವಿರಾಟ್​ ಕೊಹ್ಲಿ ಪರ ಬ್ಯಾಟ್​ ಬೀಸಿದ್ದಾರೆ. ತಂಡದ ನಾಯಕನಷ್ಟೇ ತಂಡವೂ ಉತ್ತಮವಾಗಿರಬೇಕು. ಕೊಹ್ಲಿ ಟೀಂ ಇಂಡಿಯಾ ನಾಯಕರಾಗಿ ಒಳ್ಳೆಯ ಫಲಿತಾಂಶ ನೀಡಿದ್ದಾರೆ. ಆರ್​ಸಿಬಿ ಈ ಆವೃತ್ತಿಯ 14 ಪಂದ್ಯಗಳಲ್ಲಿ 7ರಲ್ಲಿ ಜಯ ದಾಖಲಿಸಿದೆ. ಐಪಿಎಲ್​ನಲ್ಲಿ ಬಹುತೇಕ ತಂಡಗಳು ಉತ್ತಮ ಬ್ಯಾಟಿಂಗ್​ ಫಾರ್ಮ್​ ಹೊಂದಿವೆ. ಆದ್ರೆ ಆರ್​ಸಿಬಿಯಲ್ಲಿ ಕೊಹ್ಲಿ ಹಾಗೂ ಎಬಿಡಿಯನ್ನ ಬಿಟ್ಟರೆ ಪಡಿಕ್ಕಲ್​ ಮೇಲೆ ವಿಶ್ವಾಸವಿಡಬಹುದು. ಆರ್​ಸಿಬಿಗೆ ಇನ್ನೂ ಒಬ್ಬ ಆರಂಭಿಕ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್​ಮನ್​ ಸಿಕ್ಕರೆ ತಂಡ ಬಲಶಾಲಿಯಾಗುತ್ತೆ. ಐದು ಉತ್ತಮ ಬ್ಯಾಟ್ಸ್ಮನ್​ ಟೀಂನಲ್ಲಿದ್ರೆ ತಂಡ ಬಲಿಷ್ಠವಾಗುತ್ತೆ ಅನ್ನೋದು ನನ್ನ ಅಭಿಪ್ರಾಯ ಅಂತಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...