ಎಲಿಮಿನೇಟರ್ ಪಂದ್ಯದಲ್ಲಿ ಸೋತು ಐಪಿಎಲ್ ಆವೃತ್ತಿಯಿಂದ ಆರ್ಸಿಬಿ ಹೊರಬಿದ್ದ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಕೊಹ್ಲಿ ಆರ್ಸಿಬಿ ತಂಡದ ನಾಯಕನಾಗಿ ಮುಂದುವರಿಯೋದು ಸರಿಯೇ ಎಂಬ ಪ್ರಶ್ನೆಯನ್ನ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಎತ್ತಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ.
ಆದರೆ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮಾತ್ರ ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ. ತಂಡದ ನಾಯಕನಷ್ಟೇ ತಂಡವೂ ಉತ್ತಮವಾಗಿರಬೇಕು. ಕೊಹ್ಲಿ ಟೀಂ ಇಂಡಿಯಾ ನಾಯಕರಾಗಿ ಒಳ್ಳೆಯ ಫಲಿತಾಂಶ ನೀಡಿದ್ದಾರೆ. ಆರ್ಸಿಬಿ ಈ ಆವೃತ್ತಿಯ 14 ಪಂದ್ಯಗಳಲ್ಲಿ 7ರಲ್ಲಿ ಜಯ ದಾಖಲಿಸಿದೆ. ಐಪಿಎಲ್ನಲ್ಲಿ ಬಹುತೇಕ ತಂಡಗಳು ಉತ್ತಮ ಬ್ಯಾಟಿಂಗ್ ಫಾರ್ಮ್ ಹೊಂದಿವೆ. ಆದ್ರೆ ಆರ್ಸಿಬಿಯಲ್ಲಿ ಕೊಹ್ಲಿ ಹಾಗೂ ಎಬಿಡಿಯನ್ನ ಬಿಟ್ಟರೆ ಪಡಿಕ್ಕಲ್ ಮೇಲೆ ವಿಶ್ವಾಸವಿಡಬಹುದು. ಆರ್ಸಿಬಿಗೆ ಇನ್ನೂ ಒಬ್ಬ ಆರಂಭಿಕ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಸಿಕ್ಕರೆ ತಂಡ ಬಲಶಾಲಿಯಾಗುತ್ತೆ. ಐದು ಉತ್ತಮ ಬ್ಯಾಟ್ಸ್ಮನ್ ಟೀಂನಲ್ಲಿದ್ರೆ ತಂಡ ಬಲಿಷ್ಠವಾಗುತ್ತೆ ಅನ್ನೋದು ನನ್ನ ಅಭಿಪ್ರಾಯ ಅಂತಾ ಹೇಳಿದ್ದಾರೆ.