alex Certify ಚೆನ್ನೈ ವಿರುದ್ಧದ ಪಂದ್ಯದಲ್ಲಿ ’Go Green’ ಆಗ್ತಿದೆ ಆರ್‌ಸಿಬಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆನ್ನೈ ವಿರುದ್ಧದ ಪಂದ್ಯದಲ್ಲಿ ’Go Green’ ಆಗ್ತಿದೆ ಆರ್‌ಸಿಬಿ

ಈ ವರ್ಷದ ಐಪಿಎಲ್‌ನಲ್ಲಿ ಚೆನ್ನಾಗಿ ಆಡಿ, ಅಂಕಗಳ ಪಟ್ಟಿಯಲ್ಲಿರುವ ರಾಯಲ್ ಚಾಲೆಂಜರ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವಿರುದ್ಧ ಭಾನುವಾರ ಆಡಲಿದೆ.

ಈ ಪಂದ್ಯದಲ್ಲಿ ಹಸಿರು ಬಣ್ಣದ ಜೆರ್ಸಿ ಧರಿಸಲಿರುವ ಆರ್‌ಸಿಬಿ ತನ್ನ ’Go Green’ ಅಭಿಯಾನವನ್ನು ಯುಎಇ ದೇಶದಲ್ಲೂ ಮುಂದುವರೆಸಲಿದೆ. ಪ್ರತಿ ಸೀಸನ್‌ನಲ್ಲೋ ಒಂದು ಪಂದ್ಯದ ವೇಳೆ ಹಸಿರು ಬಣ್ಣದ ಜೆರ್ಸಿ ಧರಿಸಿ ಆಡುವುದು ಆರ್‌ಸಿಬಿಯ ಪರಂಪರೆಯಾಗಿದೆ.

2011ರ ಸೀಸನ್‌ನಿಂದ ಈ ಪರಿಪಾಠ ಬೆಳೆಸಿಕೊಂಡು ಬಂದಿರುವ ವಿರಾಟ್ ಕೊಹ್ಲಿ ಪಡೆ, ಭೂಮಿಯನ್ನು ಹಸಿರಾಗಿ ಇಡಲು ನಮ್ಮೆಲ್ಲರ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿರುವುದಾಗಿ ಹೇಳಿಕೊಳ್ಳುತ್ತದೆ.

ಈ ನಿಟ್ಟಿನಲ್ಲಿ ಅಭಿಮಾನಿಗಳಿಗೆ ಟ್ವಿಟರ್‌ ಮೂಲಕ ಮೆಸೇಜ್ ಒಂದನ್ನು ಕಳುಹಿಸಿರುವ ಎ.ಬಿ. ಡಿವಿಲಿಯರ್ಸ್, ಭೂಮಿಯನ್ನು ಸ್ವಚ್ಛ ಹಾಗೂ ಹಸಿರಾಗಿಡಲು ಪ್ರತಿಯೊಬ್ಬರೂ ಸಹ ತಮ್ಮ ಶ್ರಮ ಹಾಕಬೇಕೆಂದು ಕೋರಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...