alex Certify ಸತತ ಸೋಲಿನ ನಡುವೆಯೂ ‘ಆರೆಂಜ್ ಕ್ಯಾಪ್’ ಧರಿಸಿದ ಕನ್ನಡಿಗ ಕೆ.ಎಲ್.ರಾಹುಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತತ ಸೋಲಿನ ನಡುವೆಯೂ ‘ಆರೆಂಜ್ ಕ್ಯಾಪ್’ ಧರಿಸಿದ ಕನ್ನಡಿಗ ಕೆ.ಎಲ್.ರಾಹುಲ್…!

ಕೊರೊನಾ ಮಧ್ಯೆ ಐಪಿಎಲ್ ನಡೆಯುತ್ತೋ ಇಲ್ವೋ ಎಂಬ ಅನುಮಾನ ಎಲ್ಲರಲ್ಲಿಯೂ ಕಾಡಿದ್ದಂತೂ ಸತ್ಯ. ಆದರೂ ಅನೇಕ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಐಪಿಎಲ್ ಪ್ರಾರಂಭಿಸಲಾಗಿದೆ. ಈಗಾಗಲೇ ಅನೇಕ ಪಂದ್ಯಗಳು ನಡೆದಿವೆ.

ನಿನ್ನೆಯೂ ನಡೆದ 2 ಪ್ರತ್ಯೇಕ ಪಂದ್ಯಗಳಲ್ಲಿ ಮುಂಬೈ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಬೀಗಿವೆ.

ಈ ಮಧ್ಯೆ ಇಲೆವೆನ್ ಪಂಜಾಬ್ ತಂಡ ಸತತ ಸೋಲು ಅನುಭವಿಸಿದೆ. ಈ ಸೋಲಿನ ನಡುವೆಯೂ ಈ ತಂಡದ ನಾಯಕ, ಕನ್ನಡಿಗ ಕೆ.ಎಲ್.ರಾಹುಲ್ ತಮ್ಮದೇ ದಾಖಲೆ ಸೃಷ್ಟಿ ಮಾಡಿದ್ದಾರೆ. ತಂಡ ಸೋತರೂ ತಾವು ಹೆಚ್ಚಿನ ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಪಡೆದವರಿಗೆ ಈ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಅದೇ ರೀತಿ ಈ ಆರೆಂಜ್ ಕ್ಯಾಪ್ ಸದ್ಯ ರಾಹುಲ್ ಬಳಿ ಇದೆ. ಆಡಿದ 5 ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ 302 ರನ್‌ಗಳಿಸಿದ್ದಾರೆ. 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...